ಸೋಮವಾರ, ಮಾರ್ಚ್ 8, 2021
26 °C

ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸಿರು ನಿಶಾನೆ

ರಿಯೊ ಡಿ ಜನೈರೊ (ಎಪಿ): ರಷ್ಯಾದ ಲಾಂಗ್‌ಜಂಪ್‌ ಸ್ಪರ್ಧಿ ಡೇರಿಯಾ ಕ್ಲಿಶಿನಾ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಅವರು ರಿಯೊದಲ್ಲಿ  ಪಾಲ್ಗೊಳ್ಳುತ್ತಿರುವ ರಷ್ಯಾದ ಏಕೈಕ ಟ್ರ್ಯಾಕ್‌ ಮತ್ತು ಫೀಲ್ಡ್‌  ಅಥ್ಲೀಟ್ ಎನಿಸಿದ್ದಾರೆ.ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ  ಐಎಎಎಫ್‌ ರಷ್ಯಾದ 68 ಮಂದಿ ಅಥ್ಲೀಟ್‌ಗಳ ಮೇಲೆ ನಿಷೇಧ ಹೇರಿತ್ತು. ಅವರಲ್ಲಿ ಕ್ಲಿಶಿನಾ ಕೂಡ ಇದ್ದರು.ತಾನು ಮೂರು ವರ್ಷಗಳಿಂದ ರಷ್ಯಾ ದಲ್ಲಿ ವಾಸವಾಗಿಲ್ಲ. ಹೀಗಾಗಿ ತನ್ನ ಮೇಲಿನ ನಿಷೇಧ ತೆರವುಗೊಳಿಸಬೇ ಕೆಂದು ಕ್ಲಿಶಿನಾ ಕ್ರೀಡಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಾಲಯ ಕ್ಲಿಶಿನಾ ಅವರ ಮೇಲಿನ ನಿಷೇಧ ಹಿಂದಕ್ಕೆ ಪಡೆದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಐಎಎಸ್‌ಎಫ್‌ಗೆ ಆದೇಶಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.