ಶುಕ್ರವಾರ, ಡಿಸೆಂಬರ್ 13, 2019
17 °C

ಹಸುಗಳ ಸೌಂದರ್ಯ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸುಗಳ ಸೌಂದರ್ಯ ಸ್ಪರ್ಧೆ

ಕೇಸರಿ ಬಣ್ಣದ ವಸ್ತ್ರದಿಂದ ಅಲಂಕೃತಗೊಂಡ ಹಸುವಿನ ಮೇಲೆ ಸ್ವಾಮೀಜಿ ವೇಷದ ಬಾಲಕನೊಬ್ಬ ಕೂತಿದ್ದ. ಗಾವುದ ದೂರದಲ್ಲೇ ಇನ್ನೊಂದು ಹಸು ಅಲಂಕಾರದಲ್ಲಿ ತಾನೇನೂ ಕಡಿಮೆ ಇಲ್ಲ ಎಂಬಂತೆ ಬೀಗುತ್ತಾ ಬರುತ್ತಿತ್ತು. ಅದನ್ನು ಹಿಡಿದ ಅದರೊಡೆಯನಿಗೆ ಬಹುಮಾನ ಬಂದೀತೆ ಎಂಬ ಕಾತರ.ಸೌಂದರ್ಯ ಎಂಬುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಇಷ್ಟು ದಿನ ಫ್ಯಾಷನ್ ಶೋನಲ್ಲಿ ಮಿಂಚುತ್ತಿದ್ದ ಬೆಡಗಿಯರು ಒಮ್ಮೆ ಇಲ್ಲಿ ಕಣ್ಣು ಹಾಯಿಸಿದರೆ ಆಶ್ಚರ್ಯವಾಗುತ್ತದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಮೈದಾನದಲ್ಲಿ  ಜಾನುವಾರುಗಳ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿದ್ದರು.ವಿಭಿನ್ನ ರೀತಿಯಲ್ಲಿ ಅಲಂಕೃತಗೊಂಡ ಜಾನುವಾರುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ತೆಗೆದುಕೊಂಡವು. ಮೊದಲ ಬಹುಮಾನ ಹತ್ತು ಸಾವಿರ ರೂ. ಗೋವಿಂದ ಎಂಬ ಹಸು ಪಡೆಯಿತು. ರಂಗನಾಥನಿಗೆ ಐದು ಸಾವಿರ ರೂಪಾಯಿ ಬಹುಮಾನ ಸಂದರೆ, ಮಹೇಶ ಮೂರು ಸಾವಿರ ಪಡೆದು ಬೀಗಿತು.ಇಷ್ಟೇ ಅಲ್ಲದೇ ಹಸುಗಳ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಒಂದು ಅಲ್ಯೂಮಿನಿಯಮ್ ಬಕೆಟ್, ಎಳ್ಳು ಮತ್ತು ಬೆಲ್ಲದ ಮಿಶ್ರಣದ 2 ಸಾವಿರ ಪ್ಯಾಕೇಟ್‌ಗಳ ಜೊತೆಗೆ ಸಿಹಿ ಮತ್ತು ಖಾರ ಪೊಂಗಲ್ ಕೂಡ ಹಂಚಲಾಯಿತು.                          

ಪ್ರತಿಕ್ರಿಯಿಸಿ (+)