ಹಸ್ತಾಂತರಕ್ಕೆ ಜಿಎಂಆರ್ ಒಪ್ಪಿಗೆ

7
ಮಾಲೆ ವಿಮಾನನಿಲ್ದಾಣ

ಹಸ್ತಾಂತರಕ್ಕೆ ಜಿಎಂಆರ್ ಒಪ್ಪಿಗೆ

Published:
Updated:

ಮಾಲೆ/ ನವದೆಹಲಿ (ಪಿಟಿಐ):  ಮಾಲೆ ವಿಮಾನನಿಲ್ದಾಣವನ್ನು ಮಾಲ್ಡೀವ್ಸ್  ಸರ್ಕಾರಿ ಸ್ವಾಮ್ಯದ ಎಂಎಸಿಎಲ್‌ಗೆ ಒಪ್ಪಿಸಲು ಸಿದ್ಧವಿರುವುದಾಗಿ ಭಾರತದ ಜಿಎಂಆರ್ ಕಂಪೆನಿ ಹೇಳಿದೆ.ವಿಮಾನನಿಲ್ದಾಣವನ್ನು ವಶಕ್ಕೆ ಪಡೆಯುವ ಹಕ್ಕು ಮಾಲ್ಡೀವ್ಸ್‌ಗೆ ಇದೆ ಎಂದು ಸಿಂಗಪುರ ನ್ಯಾಯಾಲಯ ಗುರುವಾರ ತೀರ್ಪು ನೀಡಿತ್ತು.ಈ ಮಧ್ಯೆ ಉಭಯ ರಾಷ್ಟ್ರಗಳ ನಡುವೆ ಏರ್ಪಟ್ಟಿದ್ದ ಒಪ್ಪಂದದ ಪ್ರಕಾರ ಭಾರತವು ನೀಡಬೇಕಿರುವ ಕಾಲಾವಧಿ ಸಾಲದ ಅಡಿಯಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡುವಂತೆ ತಾನು ಕೋರಿಕೆ ಸಲ್ಲಿಸಿಲ್ಲ ಎಂದು ಮಾಲ್ಡೀವ್ಸ್ ಮೂಲಗಳು ಹೇಳಿವೆ.ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಜಿಎಂಆರ್ ಕಂಪೆನಿಗೆ ನೀಡಿದ್ದ ಗುತ್ತಿಗೆಯನ್ನು ಮಾಲ್ಡೀವ್ಸ್ ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಭಾರತವು ಸಾಲ ನೀಡಿಕೆ ಸ್ಥಗಿತಗೊಳಿಸಿದೆ ಎಂಬ ವರದಿಗಳು ಕೇಳಿಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry