ಹಾಂಕಾಂಗ್‌ ವಿಮಾನ ನಿಲ್ದಾಣ ಬಂದ್‌

7

ಹಾಂಕಾಂಗ್‌ ವಿಮಾನ ನಿಲ್ದಾಣ ಬಂದ್‌

Published:
Updated:

ಹಾಂಕಾಂಗ್‌ (ಎಎಫ್‌ಪಿ):  ‘ಉಸಗಿ’ ಚಂಡಮಾರುತ ಹಾಂಕಾಂಗ್‌ ತೀರದತ್ತ ಮುನ್ನುಗ್ಗುತ್ತಿದೆ. ಇದರ ಪರಿಣಾಮವಾಗಿ ಬಂದರು ಮತ್ತು ವಿಮಾನನಿಲ್ದಾಣ ಮುಚ್ಚಲಾಗಿದೆ.‘ಉಸಗಿ’  ರಭಸಕ್ಕೆ  ಫಿಲಿಪ್ಪೀನ್ಸ್ ನಲ್ಲಿ ಹಾಗೂ ಚೀನಾದಲ್ಲಿ ತಲಾ ಇಬ್ಬರು ಸತ್ತಿದ್ದಾರೆ.  ತೈವಾನ್‌ನಲ್ಲಿ ಭೂಕುಸಿತ ಉಂಟಾಗಿದೆ.ಉಸಗಿ ಎಂದರೆ ಜಪಾನ್ ಭಾಷೆಯಲ್ಲಿ ಮೊಲ ಎಂಬ ಅರ್ಥ. ಇದು  ಗಂಟೆಗೆ 165 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಚೀನಾದ ಜನದಟ್ಟಣೆಯ ‘ಪರ್ಲ್ ನದಿ’ ತೀರವನ್ನು ಸಮೀಪಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶದ ಜನರನ್ನು  ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.‘ಚಂಡಮಾರುತವು ಭಾರಿ ಹಾನಿ ಮಾಡುವ ಸಾಧ್ಯತೆ ಇದೆ. ನಗರದ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗುವ ಸಂಭವ ಇದೆ.  ಭಾರಿ ಗಾತ್ರದ ಅಲೆಗಳು ಏಳಬಹುದು; ಪ್ರವಾಹ ಉಂಟಾಗ­ಬಹುದು’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಚೆಕ್ ಲಾಪ್ ಕೊಕ್‌ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry