ಹಾಕಿ:ಆರ್ಮಿ ತಂಡಕ್ಕೆ ಜಯ ಆರ್ಮುಗಮ್‌ಗೆ ಮೊದಲ ಹ್ಯಾಟ್ರಿಕ್ ಗೌರವ

7

ಹಾಕಿ:ಆರ್ಮಿ ತಂಡಕ್ಕೆ ಜಯ ಆರ್ಮುಗಮ್‌ಗೆ ಮೊದಲ ಹ್ಯಾಟ್ರಿಕ್ ಗೌರವ

Published:
Updated:

ಬೆಂಗಳೂರು: ಆರ್ಮಿರೆಡ್ ತಂಡದದ ಉದಯೋನ್ಮುಖ ಆಟಗಾರ ಎಸ್. ಆರ್ಮುಗಮ್ ಅವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ಒಜೋನ್ ಗ್ರೂಪ್ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಹ್ಯಾಟ್ರಿಕ್ ಸಂಪಾದಿಸಿದ ಗೌರವಕ್ಕೆ ಪಾತ್ರರಾದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆರ್ಮಿರೆಡ್ ತಂಡದವರು 5-0 ಗೋಲುಗಳಿಂದ ಎ.ಎಸ್.ಸಿ. ತಂಡವನ್ನು ಸುಲಭವಾಗಿ ಸೋಲಿಸಿ ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿದರು.ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಎಸ್. ಆರ್ಮುಗಮ್ 39, 56, 64 ಮತ್ತು 66ನೇ ನಿಮಿಷದಲ್ಲಿ ಗೋಲುಗಳಿಸಿ ಹ್ಯಾಟ್ರಿಕ್ ಸಂಪಾದಿಸಿದರು. ಮತ್ತೊಂದು ಗೋಲು ರೆನಿಯಲ್ ಮೂಲಕ ಬಂತು. ಆರ್ಮಿ ರೆಡ್ ತಂಡದವರು ಪಂದ್ಯದ ಆರಂಭದಿಂದಲೂ ತೋರಿದ ಪ್ರದರ್ಶನವನ್ನು ಕೊನೆಯವರೆಗೂ ಉಳಿಸಿಕೊಂಡು ಬಂದರು.ಇದೇ ಲೀಗ್ ಇನ್ನೊಂದು ಪಂದ್ಯದಲ್ಲಿ ಆರ್ಮಿ ಗ್ರೀನ್ ತಂಡ 3-1 ಗೋಲುಗಳಿಂದ ಬೆಳಗಾವಿಯ ಎಂ.ಎಲ್.ಐ. ತಂಡವನ್ನು ಸೋಲಿಸಿತು. ಉತ್ತಮ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ವಿಜಯಿ ತಂಡದ ನೀರಜ್, ಸುರೇಶ್, ಲವ್‌ಪ್ರೀತ್ ಹಾಗೂ ಎದುರಾಳಿ ತಂಡದ ಸುನಿಲ್ ಕುಮಾರ್ ಚೆಂಡನ್ನು ಗುರಿಮುಟ್ಟಿಸಿದರು. ನಾಳೆ (ಗುರುವಾರ) ಮಧ್ಯಾಹ್ನ 3-45ಕ್ಕೆ ಫೋರ್ಟಿಸ್-ಎಂಇಜಿ ನಡುವೆ ಪಂದ್ಯ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry