ಹಾಕಿ:ವಿಜಾಪುರ ಕ್ಲಬ್‌ ಗೆಲುವಿನ ನಗೆ

7

ಹಾಕಿ:ವಿಜಾಪುರ ಕ್ಲಬ್‌ ಗೆಲುವಿನ ನಗೆ

Published:
Updated:

ಬೆಂಗಳೂರು: ವಿಜಾಪುರ ಕ್ಲಬ್‌ ತಂಡದವರು ಕೆಎಸ್ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ‘ಸಿ’ ಡಿವಿಷನ್ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಬುಧ­ವಾರದ ಪಂದ್ಯದಲ್ಲಿ 4–0 ಗೋಲುಗಳಿಂದ ನಾಗನಾಥ­ಪುರದ ಬಾಷ್‌ ತಂಡವನ್ನು ಮಣಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯೀ ತಂಡದ ಹಮೀದ್‌ 4ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇನ್ನುಳಿದ ಗೋಲುಗಳನ್ನು ಮೋಸಿನ್‌ (5ನೇ ನಿಮಿಷ), ಫಜಲ್‌ (22ನೇ ನಿ.) ಮತ್ತು ಅಬೀಬ್‌ (28ನೇ ನಿ.) ಕಲೆ ಹಾಕಿದರು.ಇನ್ನೊಂದು ಪಂದ್ಯದಲ್ಲಿ ಜೂಡ್‌ ಫೆಲಿಕ್ಸ್‌ 3–0 ಗೋಲುಗಳಿಂದ ಕೆಜಿಎಫ್‌ನ ಐಡಿಯಲ್ಸ್‌ ಕ್ಲಬ್‌ ಎದುರು ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry