ಸೋಮವಾರ, ಅಕ್ಟೋಬರ್ 21, 2019
26 °C

ಹಾಕಿ: ಅಭ್ಯಾಸಕ್ಕೆ ಸಹೋದರನ ಶೂ ಬಳಸಿದ್ದ ಅಶುಂತಾ!

Published:
Updated:

ರಾಂಚಿ (ಪಿಟಿಐ): ಭಾರತ ಮಹಿಳಾ ಹಾಕಿ ತಂಡದ ನಾಯಕಿ ಅಶುಂತಾ ಲಾಕ್ರ ಅಭ್ಯಾಸದ ಸಂದರ್ಭ ಸಹೋದರ ಬಿಮಲ್ ಲಾಕ್ರ ಅವರ ಶೂಗಳನ್ನು ಬಳಸಿದ್ದರಂತೆ! ಈ ವಿಷಯವನ್ನು ಸ್ವತಃ  ಅಶುಂತಾ ಬಹಿರಂಗಪಡಿಸಿದ್ದಾರೆ.`ಆಸ್ಟ್ರೋಟರ್ಫ್ ಅಂಗಳದಲ್ಲಿ ಉತ್ತಮ ಶೂ ಧರಿಸದೆ ಅಭ್ಯಾಸ ನಡೆಸಿದರೆ ಗಾಯಗೊಳ್ಳುವ ಸಾಧ್ಯತೆ ಇರುತ್ತದೆ. ನನ್ನಲ್ಲಿ ಉತ್ತಮ ಗುಣಮಟ್ಟದ ಶೂ ಇರಲಿಲ್ಲ. ಈ ಕಾರಣ ಸಹೋದರನ ಹಳೆಯ ಶೂ ಧರಿಸಿ ತಾಲೀಮು ನಡೆಸಿದ್ದೆ~ ಎಂದು ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ.`ಅಂದಿನ ದಿನಗಳಲ್ಲಿ ಸಾಕಷ್ಟು ಕಷ್ಟ ಎದುರಿಸಿದ್ದೆ. ಹಾಸ್ಟೆಲ್‌ನ ಶುಲ್ಕ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಶೂಗಳನ್ನು ಖರೀದಿಸಲೂ ನಮಗೆ ಆಗುತ್ತಿರಲಿಲ್ಲ~ ಎಂದಿದ್ದಾರೆ.ತಾನು ಹಾಕಿ ಕ್ರೀಡೆಯಲ್ಲಿ ಇಷ್ಟು ಸಾಧನೆ ಮಾಡಲು ಸಹೋದರ ರಾದ ಬಿಮಲ್ ಮತ್ತು ಬೀರೇಂದ್ರ ಲಾಕ್ರ ಕಾರಣ ಎಂಬುದು ಅಶುಂತಾ ಅವರ ಹೇಳಿಕೆ. 2000 ದಲ್ಲಿ ನಡೆದ 18 ವರ್ಷ ವಯಸ್ಸಿನೊಳಗಿನವರ ಏಷ್ಯಾ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡದಲ್ಲಿ ಅಶುಂತಾ ಇದ್ದರು.

Post Comments (+)