ಹಾಕಿ: ಅರ್ಹತಾ ಟೂರ್ನಿಗೆ ಭಾರತದ ಮಹಿಳೆಯರು ಅಭ್ಯಾಸ

7

ಹಾಕಿ: ಅರ್ಹತಾ ಟೂರ್ನಿಗೆ ಭಾರತದ ಮಹಿಳೆಯರು ಅಭ್ಯಾಸ

Published:
Updated:

ನವದೆಹಲಿ (ಪಿಟಿಐ): ಒಲಿಂಪಿಕ್ಸ್ ಅರ್ಹತಾ ಸುತ್ತಿನ ಹಾಕಿ ಟೂರ್ನಿ ಆರಂಭವಾಗಲು ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಆದರೆ ಭಾರತ ಮಹಿಳೆಯರ ತಂಡ ಉತ್ತಮ ಆರಂಭ ಪಡೆಯುವಲ್ಲಿ ಪದೇಪದೇ ಎಡವುತ್ತಿದೆ.ಇದನ್ನು ತಂಡದ ಕೋಚ್ ಸಿ.ಆರ್.ಕುಮಾರ್ ಒಪ್ಪಿಕೊಂಡಿದ್ದಾರೆ ಕೂಡ. `ಉತ್ತಮ ಆರಂಭ ಪಡೆಯುವಲ್ಲಿ ನಾವು ವಿಫಲವಾಗುತ್ತಿರುವುದು ನಿಜ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ನಾವು ಕೆಲವೊಂದು ಬದಲಾವಣೆ ಮಾಡಬೇಕಾಗಿದೆ~ ಎಂದು ಅವರು ನುಡಿದಿದ್ದಾರೆ.ಅರ್ಹತಾ ಸುತ್ತಿನ ಟೂರ್ನಿ ಫೆಬ್ರುವರಿ 18ರಿಂದ 26ರವರೆಗೆ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯ ಆರಂಭದ ದಿನವೇ ಆತಿಥೇಯ ಭಾರತ ತಂಡ ಉಕ್ರೇನ್‌ನ ಸವಾಲನ್ನು ಎದುರಿಸಲಿದೆ. ಭಾರತ ಇರುವ ಗುಂಪಿನಲ್ಲಿ ಕೆನಡಾ, ಪೊಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಟಲಿ ತಂಡಗಳಿವೆ.`ನಮ್ಮ ದೌರ್ಬಲ್ಯ ಎದುರಾಳಿ ತಂಡಗಳಿಗೂ ಗೊತ್ತು. ಹಾಗಾಗಿ ಅವರು ನಮ್ಮ ತಂಡದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿ ಆರಂಭಿಕ ಮುನ್ನಡೆ ಪಡೆಯುತ್ತಿದ್ದಾರೆ. ಹಾಗಾಗಿ ನಾವು ಆದಷ್ಟು ಬೇಗ ಎಚ್ಚೆತ್ತುಕೊಂಡು ಈ ವಿಭಾಗದತ್ತ ಗಮನ ಹರಿಸಬೇಕು. ಈ ಕಾರಣ ನಮ್ಮ ಆಟದ ಶೈಲಿಯಲ್ಲಿ ಕೆಲವೊಂದು ಮಾರ್ಪಾಟು ಮಾಡಿಕೊಳ್ಳಬೇಕು~ ಎಂದು ಕುಮಾರ್ ವಿವರಿಸಿದ್ದಾರೆ.ಕೆನಡಾ ವಿರುದ್ಧ ಮಂಗಳವಾರ ನಡೆದ ಅಭ್ಯಾಸ ಪಂದ್ಯದಲ್ಲೂ ಭಾರತ ತಂಡಕ್ಕೆ ಇದೇ ಅನುಭವವಾಯಿತು. ಈ ಪಂದ್ಯದಲ್ಲಿ ಭಾರತ 5-2 ಗೋಲುಗಳಿಂದ ಗೆಲುವು ಸಾಧಿಸಿತಾದರೂ ಮೊದಲು ಮುನ್ನಡೆ ಸಾಧಿಸಿದ್ದು ಕೆನಡಾ ತಂಡ.ಆದರೆ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.`ನಾವು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಹಣ್ಣಾಗಿಸಿಕೊಂಡೆವು. ಫೀಲ್ಡ್ ಗೋಲು ಗಳಿಸುವಲ್ಲಿಯೂ ಎಡವಲಿಲ್ಲ. ನಮ್ಮ ತಂಡದವರ ಗುರಿಯೆಡೆಗಿನ ಎಲ್ಲ ಹೊಡೆತಗಳು ನಿಖರವಾಗಿದ್ದವು~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry