ಹಾಕಿ: ಅ. 15 ರಿಂದ ತರಬೇತಿ ಶಿಬಿರ

7

ಹಾಕಿ: ಅ. 15 ರಿಂದ ತರಬೇತಿ ಶಿಬಿರ

Published:
Updated:

ನವದೆಹಲಿ (ಪಿಟಿಐ): ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಲ್ಯಾಂಕೊ ಇಂಟರ್‌ನ್ಯಾಷನಲ್ ಸೂಪರ್ ಸೀರಿಸ್ ಹಾಗೂ 34ನೇ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಭಾರತದ 48 ಸದಸ್ಯರ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದೆ.ಕರ್ನಲ್ ಬಲಬೀರ್ ಸಿಂಗ್, ಬಿ.ಪಿ. ಗೋವಿಂದ ಮತ್ತು ಸೈಯದ್ ಅಲಿ ಅವರನ್ನೊಳಗೊಂಡ ಹಾಕಿ ಇಂಡಿಯಾ ಆಯ್ಕೆ ಸಮಿತಿಯು ಮಂಗಳವಾರ ತಂಡವನ್ನು ಪ್ರಕಟಿಸಿತು.ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸೀನಿಯರ್ ಹಾಕಿ ಟೂರ್ನಿಯಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ತಂಡದ ಆಯ್ಕೆ ನಡೆದಿದೆ. 48 ಆಟಗಾರರಲ್ಲದೆ, ಹೆಚ್ಚುವರಿ ಆಟಗಾರರಾಗಿ ಒಂಬತ್ತು ಆಟಗಾರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಎಚ್‌ಎಫ್ ನಡೆಸುವ ವಿಶ್ವ ಹಾಕಿ ಸರಣಿಯಲ್ಲಿ ಪಾಲ್ಗೊಂಡ ಕೆಲವರು ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.ಲ್ಯಾಂಕೊ ಇಂಟರ್‌ನ್ಯಾಷನಲ್ ಸೂಪರ್ ಸೀರಿಸ್ ಹಾಕಿ ಟೂರ್ನಿ ಪರ್ತ್‌ನಲ್ಲಿ ನವೆಂಬರ್ 22 ರಿಂದ 25ರ ವರೆಗೆ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಡಿಸೆಂಬರ್ 1 ರಿಂದ 9ರ ವರೆಗೆ ಮೆಲ್ಬರ್ನ್‌ನಲ್ಲಿ ನಡೆಯಲಿದೆ.ಸಂಭಾವ್ಯ ಆಟಗಾರರ ಪಟ್ಟಿ: ಗೋಲ್‌ಕೀಪರ್: ಭರತ್ ಚೆಟ್ರಿ (ಕರ್ನಾಟಕ), ಪಿ.ಆರ್. ಶ್ರೀಜೇಶ್ (ತಮಿಳುನಾಡು), ಪಿ.ಟಿ. ರಾವ್ (ಸರ್ವಿಸಸ್), ತರುಣ್ ತಿಮ್ಮಣ್ಣ (ಕರ್ನಾಟಕ), ಶ್ರೀನಿವಾಸ್ ರಾವ್ (ಆಂಧ್ರ ಪ್ರದೇಶ)

ಫುಲ್‌ಬ್ಯಾಕ್ಸ್: ವಿ.ಆರ್. ರಘುನಾಥ್ (ಕರ್ನಾಟಕ), ಇಗ್ನೇಸ್ ಟಿರ್ಕಿ (ಸರ್ವಿಸಸ್), ಸಂದೀಪ್ ಸಿಂಗ್ (ಹರಿಯಾಣ), ರೂಪಿಂದರ್ ಪಾಲ್ ಸಿಂಗ್ (ತಮಿಳುನಾಡು), ಹರ್‌ಬೀರ್ ಸಿಂಗ್ (ಪಂಜಾಬ್), ಲೊವ್‌ದೀಪ್ ಸಿಂಗ್ (ಚಂಡೀಗಡ)ಹಾಫ್‌ಬ್ಯಾಕ್ಸ್: ಸರ್ದಾರ್ ಸಿಂಗ್ (ಹರಿಯಾಣ), ಕೊತಜಿತ್ ಸಿಂಗ್ (ಮಣಿಪುರ), ಬೀರೇಂದ್ರ ಲಾಕ್ರ (ಜಾರ್ಖಂಡ್), ಮನ್‌ಪ್ರೀತ್ ಸಿಂಗ್ (ಪಂಜಾಬ್), ಎಂ.ಬಿ. ಅಯ್ಯಪ್ಪ (ಕರ್ನಾಟಕ), ಬಿಪಿನ್ (ಒಡಿಶಾ), ಪ್ರದೀಪ್ ಮೋರ್ (ಹರಿಯಾಣ), ಗರ್ನೈಲ್ ಸಿಂಗ್ (ಹರಿಯಾಣ), ಅಮಿತ್ ರೋಹಿದಾಸ್ (ಒಡಿಶಾ), ಸಂಪತ್ ಕುಮಾರ್ (ಆಂಧ್ರಪ್ರದೇಶ), ಶಿರೀಶ್ ಬಿಸೇನ್ (ಉತ್ತರ ಪ್ರದೇಶ), ಬರ್ಕತ್ ಸಿಂಗ್ (ಯೂನಿವರ್ಸಿಟಿ), ವಿವೇಕ್ ಧಾರ್ (ರೈಲ್ವೇಸ್), ಜಾನಿ ಜಸ್ರೋಷಿಯ (ಸರ್ವಿಸಸ್)ಫಾರ್ವರ್ಡ್ಸ್: ಎಸ್.ವಿ. ಸುನಿಲ್ (ಸರ್ವಿಸಸ್), ಗುರ್ವಿಂದರ್ ಸಿಂಗ್ ಚಾಂಡಿ (ಪಂಜಾಬ್), ಸರ್ವಂಜಿತ್ ಸಿಂಗ್ (ಪಂಜಾಬ್), ಚಿಂಗ್ಲೇಸನ ಸಿಂಗ್ (ರೈಲ್ವೇಸ್), ಶಿವೇಂದ್ರ ಸಿಂಗ್ (ಏರ್ ಇಂಡಿಯಾ), ದಾನಿಷ್ ಮುಜ್ತಬಾ (ಉತ್ತರ ಪ್ರದೇಶ), ತುಷಾರ್ ಖಾಂಡೇಕರ್ (ಉತ್ತರ ಪ್ರದೇಶ), ಎಸ್.ಕೆ. ಉತ್ತಪ್ಪ (ಕರ್ನಾಟಕ), ಪ್ರಧಾನ್ ಸೋಮಣ್ಣ (ಏರ್ ಇಂಡಿಯಾ), ನಿತಿನ್ ತಿಮ್ಮಯ್ಯ (ಕರ್ನಾಟಕ), ಯುವರಾಜ್ ವಾಲ್ಮೀಕಿ (ಮಹಾರಾಷ್ಟ್ರ), ಧರ್ಮವೀರ್ ಸಿಂಗ್ (ಪಂಜಾಬ್), ಆಕಾಶ್‌ದೀಪ್ ಸಿಂಗ್ (ಪಂಜಾಬ್), ಎಂ.ಜಿ. ಪೂಣಚ್ಚ (ರೈಲ್ವೇಸ್), ಪ್ರಭ್‌ದೀಪ್ ಸಿಂಗ್ (ಪಂಜಾಬ್), ಪಿ.ಎಲ್. ತಿಮ್ಮಣ್ಣ (ಕರ್ನಾಟಕ), ಸುಖ್‌ದೇವ್ ಸಿಂಗ್ (ಸರ್ವಿಸಸ್), ಲವ್‌ಪ್ರೀತ್ ಸಿಂಗ್ (ಸರ್ವಿಸಸ್), ಸಂಜಯ್‌ವೀರ್ ಸಿಂಗ್ (ರೈಲ್ವೇಸ್), ಗುರ್‌ಪ್ರೀತ್ ಸಿಂಗ್ (ಯೂನಿವರ್ಸಿಟಿ), ಸನ್ವಾನ್ ಅಲಿ (ಸರ್ವಿಸಸ್), ವಿಕ್ರಮ್‌ಜೀತ್ ಸಿಂಗ್ (ಪಂಜಾಬ್), ಕರಂಜಿತ್ ಸಿಂಗ್ (ಹರಿಯಾಣ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry