ಹಾಕಿ: ಆರ್ಮಿ ಗ್ರೀನ್ ಚಾಂಪಿಯನ್

7

ಹಾಕಿ: ಆರ್ಮಿ ಗ್ರೀನ್ ಚಾಂಪಿಯನ್

Published:
Updated:

ಬೆಂಗಳೂರು: ಆರ್ಮಿ ಗ್ರೀನ್ ತಂಡದವರು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಇಲ್ಲಿ ಕೊನೆಗೊಂಡ 15ನೇ ವರ್ಷದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಆರ್ಮಿ ಗ್ರೀನ್ 4-0 ಗೋಲುಗಳಿಂದ ಎಂಇಜಿ `ಎ~ ತಂಡವನ್ನು ಸೋಲಿಸಿತು.

ಆರ್ಮಿ ಗ್ರೀನ್ ವಿರಾಮದ ವೇಳೆ 2-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಬಳಿಕ ಮತ್ತೆರಡು ಗೋಲು ದಾಖಲಿಸಿ ಟ್ರೋಫಿ ಎತ್ತಿ ಹಿಡಿಯಿತು.

ಪಂದ್ಯದ 20ನೇ ನಿಮಿಷದಲ್ಲಿ ಬಲ್ವಿಂದರ್ ನೀಡಿದ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ರೊಮನ್ ಎಡವಲಿಲ್ಲ. ಚುರುಕಿನ ಪ್ರದರ್ಶನ ತೋರಿದ ಹೆಮ್ಲೆಟ್ 31ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕರ್ನಾರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿತು.

ಪಂದ್ಯ ಶುರುವಾದ ಕೇವಲ ಒಂದು ನಿಮಿಷದಲ್ಲಿ ಅಂದರೆ 36ನೇ ನಿಮಿಷ ದಲ್ಲಿ ಸಿಕ್ಕಿದ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ವಿಜೇತ ತಂಡದ ಗ್ಯಾಬ್ರಿಯಲ್ ಹಣ್ಣಾಗಿಸಿ ಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry