ಹಾಕಿ: ಆರ್ಮಿ ರೆಡ್‌ಗೆ ಮಣಿದ ಎಂಎಲ್‌ಐ

7

ಹಾಕಿ: ಆರ್ಮಿ ರೆಡ್‌ಗೆ ಮಣಿದ ಎಂಎಲ್‌ಐ

Published:
Updated:

ಬೆಂಗಳೂರು: ಆರ್ಮಿ ರೆಡ್ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ‘ಓಜೋನ್ ಗ್ರೂಪ್’ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಗೆಲುವು ಪಡೆಯಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆರ್ಮಿ ರೆಡ್ ತಂಡ 3-0 ಗೋಲುಗಳಿಂದ ಎಂಎಲ್‌ಐ ತಂಡವನ್ನು ಸುಲಭವಾಗಿ ಮಣಿಸಿತು.

ಸಂಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಎಸ್. ಅಲಿ, ಜೆರೋಮಿ, ಚಿತ್ತರಂಜನ್ ಸಿಂಗ್ ಕ್ರಮವಾಗಿ 27, 29, 36ನೇ ನಿಮಿಷದಲ್ಲಿ ಗೋಲು ತಂದಿತ್ತು ಆರ್ಮಿ ತಂಡದ ಗೆಲುವಿಗೆ ಕಾರಣರಾದರು.

ಇನ್ನೊಂದು ಪಂದ್ಯದಲ್ಲಿ ನಾಮಧಾರಿ ಇಲೆವನ್ ತಂಡ 6-1 ಗೋಲುಗಳಿಂದ ಆರ್ಮಿ ಗ್ರೀನ್ ತಂಡದ ಎದುರು ಸುಲಭ ಗೆಲುವು ಪಡೆಯಿತು. ಪಂದ್ಯದ ಮೊದಲಾರ್ಧದಲ್ಲಿ ನಾಮಧಾರಿ ತಂಡ 2-1ಗೋಲಿನಿಂದ ಮುನ್ನಡೆ ಸಾಧಿಸಿತ್ತು.

ವಿಜಯಿ ತಂಡದ ಮಾಲಕ್ ಸಿಂಗ್ (12 ಹಾಗೂ 60), ಹರ್‌ದೀಪ್ ಸಿಂಗ್ (16 ಹಾಗೂ 50) ತಲಾ ಎರಡು ಗೋಲುಗಳನ್ನು ತಂದಿತ್ತರೆ ಬಲ್ವೀಂದರ್ ಸಿಂಗ್ ಹಾಗೂ ಗುರ್ಮಿಲ್ ಸಿಂಗ್ ಕ್ರಮವಾಗಿ 53, 68ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಎದುರಾಳಿ ಆರ್ಮಿ ಗ್ರೀನ್ ತಂಡದ ಏಕೈಕ ಗೋಲನ್ನು ಅರುಣ್ ಕುಮಾರ್ 31ನೇ ನಿಮಿಷದಲ್ಲಿ ತಂದಿತ್ತರು.

ಶುಕ್ರವಾರದ ಪಂದ್ಯಗಳು: ಬಿಪಿಸಿಎಲ್-ಎಎಸ್‌ಸಿ (ಮಧ್ಯಾಹ್ನ 12.30), ಎಸ್‌ಎಐ-ಎಂಎಲ್‌ಐ (ಮಧ್ಯಾಹ್ನ 2.15), ಐಒಸಿಎಲ್-ಆರ್ಮಿ ಗ್ರೀನ್ (ಮಧ್ಯಾಹ್ನ 3.45), ಏರ್ ಇಂಡಿಯಾ-ಫೋರ್ಟಿಸ್ (ಸಂಜೆ 5.30).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry