ಮಂಗಳವಾರ, ಸೆಪ್ಟೆಂಬರ್ 17, 2019
24 °C

ಹಾಕಿ: ಆರ್‌ಡಬ್ಲ್ಯುಎಫ್ ತಂಡಕ್ಕೆ ಮಣಿದ ಎಂಇಜಿ

Published:
Updated:

ಬೆಂಗಳೂರು: ಉತ್ತಮ ಹೋರಾಟ ತೋರಿದ ಆರ್‌ಡಬ್ಲ್ಯುಎಫ್ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್ ತಂಡ 4-2ಗೋಲುಗಳಿಂದ ಎಂಇಜಿ ಬಾಯ್ಸ ತಂಡವನ್ನು ಸೋಲಿಸಿತು.ಸುಧೀರ್ ದೀಕ್ಷಿತ್ (17), ಮೊಹಮ್ಮದ್ ಇಮ್ರಾನ್ (39), ಅರುಣ್ ರವಿ (45) ಹಾಗೂ ರವಿ ಕುಮಾರ್ (58) ಗೋಲು ಗಳಿಸಿ ಆರ್‌ಡಬ್ಲ್ಯುಎಫ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹುಬ್ಬಳ್ಳಿಯ ಸದರ್ನ್ ವೆಸ್ಟರ್ನ್ ರೈಲ್ವೆ ತಂಡ 3-1ಗೋಲುಗಳಿಂದ ಸೀನರ್ಜಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು.ಮಂಗಳವಾರದ ಪಂದ್ಯಗಳು: ಆರ್‌ಡಬ್ಲುಎಫ್-ಎಸ್‌ಡಬ್ಲ್ಯುಆರ್ (ಸಂಜೆ 4ಗಂಟೆಗೆ).

Post Comments (+)