ಗುರುವಾರ , ಅಕ್ಟೋಬರ್ 17, 2019
21 °C

ಹಾಕಿ: ಆರ್‌ಬಿಐ ವಿರುದ್ಧ ಎಸ್‌ಎಐ ತಂಡಕ್ಕೆ ಜಯ

Published:
Updated:

ಬೆಂಗಳೂರು: ಎಸ್‌ಎಐ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಯಲ್ಲಿ ಸುಲಭ ಜಯ ಪಡೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಸ್‌ಎಐ 6-0 ಗೋಲುಗಳಿಂದ ಆರ್‌ಬಿಐ ತಂಡವನ್ನು ಮಣಿಸಿತು. ರಾಕೇಶ್ 21 ಮತ್ತು 58ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ತಂಡದ ಇತರ ಗೋಲುಗಳನ್ನು ರಂಜಿತ್ (25), ಉಮೇಶ್ (28), ಪೊನ್ನಣ್ಣ (40) ಮತ್ತು ರಫೀಕ್ (58) ತಂದಿತ್ತರು.ದಿನದ ಮತ್ತೊಂದು ಪಂದ್ಯದಲ್ಲಿ ಪಿಸಿಟಿಸಿ 2-0 ಗೋಲುಗಳಿಂದ ಎಬಿಎಚ್‌ಎ ವಿರುದ್ಧ ಜಯ ಪಡೆಯಿತು. ವಿಜಯಿ ತಂಡದ ಎರಡೂ ಗೋಲುಗಳನ್ನು ರಾಜೇಶ್ (13 ಮತ್ತು 18) ಗಳಿಸಿದರು.

Post Comments (+)