ಶನಿವಾರ, ಮಾರ್ಚ್ 6, 2021
18 °C

ಹಾಕಿ ಇಂಡಿಯಾ ಲೀಗ್‌; ಸಂದೀಪ್‌ ಗೆಲುವಿನ ಗೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ ಇಂಡಿಯಾ ಲೀಗ್‌; ಸಂದೀಪ್‌ ಗೆಲುವಿನ ಗೋಲು

ರಾಂಚಿ (ಪಿಟಿಐ): ಭಾರತ ತಂಡದ ಮಾಜಿ ನಾಯಕ ಸಂದೀಪ್‌ ಸಿಂಗ್‌  ಮಿಂಚಿನ ಆಟದ ಮೂಲಕ ಶನಿವಾರ ತವರಿನ ಅಭಿಮಾನಿಗಳ ಮನಗೆದ್ದರು. ರೋಚಕ ಹಂತದಲ್ಲಿ ಸಂದೀಪ್‌ ತಂದಿತ್ತ ಗೋಲಿನ ಬಲದಿಂದ ಹಾಲಿ ಚಾಂಪಿಯನ್‌ ರಾಂಚಿ ರೇಸ್‌ ತಂಡ ಹಾಕಿ ಇಂಡಿಯಾ ಲೀಗ್‌ನ ಪಂದ್ಯದಲ್ಲಿ ಗೆಲುವು ಗಳಿಸಿತು.ಶನಿವಾರ ನಡೆದ ಪಂದ್ಯದಲ್ಲಿ ರಾಂಚಿ ತಂಡ 5–4 ಗೋಲುಗಳಿಂದ ಪಂಜಾಬ್‌ ವಾರಿಯರ್ಸ್‌ ತಂಡವನ್ನು ಪರಾಭವಗೊಳಿಸಿತು. ಎರಡೂ ತಂಡಗಳಲ್ಲಿಯೂ ಬಲಿಷ್ಠ ಆಟಗಾರರಿದ್ದ ಕಾರಣ ಪಂದ್ಯದ ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು.ಏಳನೇ ನಿಮಿಷದಲ್ಲಿ ಅರ್ಮಾನ್‌ ಖುರೇಷಿ ಫೀಲ್ಡ್‌ ಗೋಲು ಗಳಿಸಿದ್ದರಿಂದ ವಾರಿಯರ್ಸ್‌ಗೆ 2–0ರ ಮುನ್ನಡೆ ಲಭಿಸಿತು. ಬಳಿಕ ರಾಂಚಿ  ತಂಡದ ಕೊತಾಜಿತ್‌ ಸಿಂಗ್‌ ಮತ್ತು ಡೇನಿಯಲ್‌ ಬೆಲೆ ಕ್ರಮವಾಗಿ 18 ಮತ್ತು 28ನೇ ನಿಮಿಷಗಳಲ್ಲಿ ಗೋಲು ತಂದಿತ್ತು ಸಮಬಲ ಮಾಡಿಕೊಂಡರು.31ನೇ  ನಿಮಿಷದಲ್ಲಿ ವಾರಿಯರ್ಸ್‌ ತಂಡದ ಸತ್ಬೀರ್‌ ಸಿಂಗ್‌ ಫೀಲ್ಡ್‌ ಗೋಲು ದಾಖಲಿಸಿದರು. ಹೀಗಾಗಿ ಈ ತಂಡ 4–2ರ ಮುನ್ನಡೆ ತನ್ನದಾಗಿಸಿಕೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.