ಸೋಮವಾರ, ಮೇ 17, 2021
28 °C

ಹಾಕಿ: ಇಂದಿನಿಂದ ನ್ಯಾಷನಲ್ ಲೀಗ್ ಚಾಂಪಿಯನ್‌ಷಿಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಎಚ್‌ಎ ಪ್ರತಿವರ್ಷ ನಡೆಸುವ ಸೂಪರ್ ಡಿವಿಷನ್ ಹಾಕಿ ಲೀಗ್ ಈ ಬಾರಿ `ಓಜೋನ್ ಗ್ರೂಪ್ ನ್ಯಾಷನಲ್ ಹಾಕಿ ಲೀಗ್ ಚಾಂಪಿಯನ್‌ಷಿಪ್~ ಎಂಬ ಹೆಸರಿನಡಿ ನಡೆಯಲಿದ್ದು, ಗುರುವಾರ ಚಾಲನೆ ಲಭಿಸಲಿದೆ. ಇದರಲ್ಲಿ ಒಟ್ಟು 11 ತಂಡಗಳು ಪಾಲ್ಗೊಳ್ಳಲಿವೆ ಎಂದು ಕೆಎಸ್‌ಎಚ್‌ಎ ಪ್ರಕಟಣೆ ತಿಳಿಸಿದೆ. ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಕ್ರಮವಾಗಿ 2 ಲಕ್ಷ, 1.5 ಲಕ್ಷ, 1 ಲಕ್ಷ ಹಾಗೂ 50 ಸಾವಿರ ರೂ. ಬಹುಮಾನ ಪಡೆಯಲಿವೆ.ಸೂಪರ್ ಡಿವಿಷನ್‌ನಲ್ಲಿ ಆಡಿದ 13 ತಂಡಗಳಲ್ಲಿ ಆರ್ಮಿ ಗ್ರೀನ್, ಎಂಇಜಿ `ಎ~ ಮತ್ತು ಐಎಎಫ್ ತಂಡಗಳು ಎರಡನೇ ಹಂತಕ್ಕೆ ಅರ್ಹತೆ ಪಡೆದವು.ಪಾಲ್ಗೊಳ್ಳುವ ತಂಗಳು:  ಏರ್ ಇಂಡಿಯಾ, ಆರ್ಮಿ ಗ್ರೀನ್, ಆರ್ಮಿ ರೆಡ್, ಬಿಪಿಸಿಎಲ್, ಫೋರ್ಟಿಸ್, ಐಎಎಫ್, ಐಒಸಿಎಲ್, ಎಂಇಜಿ `ಎ~,  ಒಎನ್‌ಜಿಸಿ, ಪಿಎನ್‌ಬಿ, ಎಸ್‌ಎಐಇಂದಿನ ಪಂದ್ಯ: ಆರ್ಮಿ ಗ್ರೀನ್- ಎಂಇಜಿ `ಎ~ (ಸಂಜೆ 4.30ಕ್ಕೆ ಆರಂಭ)ಪಿಸಿಟಿಸಿಗೆ ಜಯ: ಬುಧವಾರ ನಡೆದ ಮೊದಲ ಹಂತದ ಲೀಗ್‌ನ ಪಂದ್ಯದಲ್ಲಿ ಪಿಸಿಟಿಸಿ 2-1 ಗೋಲುಗಳಿಂದ ಸಿಒಇ ಮೇಲೂ, ಎಎಸ್‌ಸಿ 5-1 ರಲ್ಲಿ ಕೆನರಾ ಬ್ಯಾಂಕ್ ವಿರುದ್ಧವೂ ಗೆಲುವು ಪಡೆದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.