ಹಾಕಿ: ಇಂದು ಭಾರತ- ಆಸ್ಟ್ರೇಲಿಯಾ ಪಂದ್ಯ

7

ಹಾಕಿ: ಇಂದು ಭಾರತ- ಆಸ್ಟ್ರೇಲಿಯಾ ಪಂದ್ಯ

Published:
Updated:

ಮೆಲ್ಬರ್ನ್ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಕನಸಿನಲ್ಲಿರುವ ಭಾರತ ತಂಡ ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.ಹಾಲಿ ಚಾಂಪಿಯನ್ ಆಸೀಸ್ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವುದು ಖಚಿತ. ಆತಿಥೇಯ ತಂಡದವರು ಸತತ ಆರನೇ ಬಾರಿ ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದಾರೆ. ಆಸೀಸ್ ತಂಡ 2007ರ ಟೂರ್ನಿಯ ಫೈನಲ್‌ನಲ್ಲಿ ಜರ್ಮನಿ ಎದುರು ಸೋಲು ಅನುಭವಿಸಿತ್ತು. ಆ ಬಳಿಕ ಸತತ ನಾಲ್ಕು ಸಲ ಚಾಂಪಿಯನ್ ಆಗಿದೆ. ಇದೀಗ ಸತತ ಐದನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂನ್ನು ಮಣಿಸಿದ್ದ ಭಾರತ ತಂಡದ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಗೆಲುವು ಪಡೆಯಬೇಕಾದರೆ ಸಂಘಟಿತ ಪ್ರದರ್ಶನ ನೀಡುವುದು ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry