ಶನಿವಾರ, ನವೆಂಬರ್ 16, 2019
21 °C

ಹಾಕಿ: ಎಂಇಜಿ ಶುಭಾರಂಭ

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಮದ್ರಾಸ್ ಎಂಜಿನಯರಿಂಗ್ ಗ್ರೂಪ್ (ಎಂಇಜಿ) ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಆರಂಭವಾದ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ 6-2ಗೋಲುಗಳಿಂದ ಎಎಸ್‌ಸಿ ತಂಡವನ್ನು ಮಣಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಬೋಪಣ್ಣ 18ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದೇ ಆಟಗಾರ 24ನೇ ನಿಮಿಷದಲ್ಲಿ ಇನ್ನೊಂದು ಗೋಲು ತಂದಿತ್ತರು. ಈ ತಂಡದ ಇನ್ನುಳಿದ ಗೋಲುಗಳನ್ನು ಡಿ. ಉತ್ತಪ್ಪ (33ನೇ ನಿಮಿಷ), ರೋಹಿತ್ ಟರ್ಕಿ (48ನೇ ನಿ.), ಸುನಿಲ್ (61 ಹಾಗೂ 69ನೇ ನಿಮಿಷ) ಗಳಿಸಿದರು.ಎಎಸ್‌ಸಿಯ ಡಂಗ್ ಡಂಗ್ ಹಾಗೂ ಗುರ್‌ಪ್ರೀತ್ ಸಿಂಗ್ ಕ್ರಮವಾಗಿ 20 ಹಾಗೂ 55ನೇ ನಿಮಿಷದಲ್ಲಿ ತಲಾ ಒಂದು ಗೋಲು ಕಲೆ ಹಾಕಿದರು.ಏರ್ ಇಂಡಿಯಾ, ಬಿಪಿಸಿಎಲ್, ಐಒಸಿಎಲ್, ಆರ್ಮಿ ರೆಡ್, ನಾಮಧಾರಿ ಸೀಡ್ಸ್, ಫೋರ್ಟಿಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಭಾರತ ಕ್ರೀಡಾ ಪ್ರಾಧಿಕಾರ, ಆರ್ಮಿ ಗ್ರೀನ್, ಎಂಇಜಿ ಮತ್ತು ಎಎಸ್‌ಸಿ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿವೆ.ಏ. 14ರಿಂದ 20ರ ವರೆಗೆ ನಡೆಯಲಿರುವ ಪಂದ್ಯಗಳನ್ನು ಹೊನಲು ಬೆಳಕಿನಲ್ಲಿ ನಡೆಯಲಿವೆ. ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಮೊದಲ ಸ್ಥಾನ (2 ಲಕ್ಷ ರೂಪಾಯಿ), ಎರಡನೇ ಸ್ಥಾನ (1.5 ಲಕ್ಷ ರೂ.), ಮೂರನೇ ಸ್ಥಾನ (1 ಲಕ್ಷ ರೂ.) ಮತ್ತು ನಾಲ್ಕನೇ ಸ್ಥಾನ (50,000 ರೂ.) ಮೊತ್ತ ಒಳಗೊಂಡಿದೆ.ಮಂಗಳವಾರದ ಪಂದ್ಯಗಳು: ಆರ್ಮಿ ರೆಡ್-ಆರ್ಮಿ ಗ್ರೀನ್ (ಮಧ್ಯಾಹ್ನ 3.15) ಹಾಗೂ ಎಂಇಜಿ-ಭಾರತ ಕ್ರೀಡಾ ಪ್ರಾಧಿಕಾರ (ಸಂಜೆ 4.45ಕ್ಕೆ). 

ಪ್ರತಿಕ್ರಿಯಿಸಿ (+)