ಹಾಕಿ: ಎಂಎಲ್‌ಐ ಎದುರು ಗೆದ್ದ ಬಿಪಿಸಿಎಲ್ ತಂಡ

7

ಹಾಕಿ: ಎಂಎಲ್‌ಐ ಎದುರು ಗೆದ್ದ ಬಿಪಿಸಿಎಲ್ ತಂಡ

Published:
Updated:

ಬೆಂಗಳೂರು: ಅಮರ್ ಅಯ್ಯಮ್ಮ ತಂದಿತ್ತ ಎರಡು ಗೋಲುಗಳ ನೆರವಿನಿಂದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸಂಸ್ಥೆ ಆಶ್ರಯದ ‘ಒಜೋನ್ ಗ್ರೂಪ್’ ಪ್ರಾಯೋಜಿತ ಎರಡನೇ ಹಂತದ ರಾಜ್ಯ ಸೂಪರ್ ಡಿವಿಷನ್ ಹಾಕಿ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಪಿಸಿಎಲ್ 5-1 ಗೋಲುಗಳಿಂದ ಮರಾಠ ಲೈಟ್ ಇನ್‌ಫ್ಯಾಂಟ್ರಿ (ಎಂಎಲ್‌ಐ) ತಂಡವನ್ನು ಮಣಿಸಿತು,

ವಿರಾಮದ ವೇಳೆಗೆ ವಿಜಯಿ ತಂಡ 3-1 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಬಿಪಿಸಿಎಲ್ ತಂಡದ ಹರಿ ಪ್ರಸಾದ್ (16ನೇ ನಿಮಿಷ), ಅಮರ್ ಅಯ್ಯಮ್ಮ (20ನೇ ನಿ. ಹಾಗೂ 40ನೇ ನಿ.), ಕರಮ್‌ಜಿತ್ ಸಿಂಗ್ (32ನೇ ನಿ.) ಹಾಗೂ ಇರ್ಶಾದ್ ಅಲಿ (46ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

20ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಸ್ಟ್ರೋಕ್ ಅವಕಾಶವನ್ನು ಅಮರ್ ಅಯ್ಯಮ್ಮ ಗೋಲಾಗಿ ಪರಿವರ್ತಿಸಿ ದರು. ಹಾಗೇ, 46ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಇರ್ಶಾ ದ್ ಅಲಿ ಗೋಲಾಗಿ ಪರಿವರ್ತಿಸಿ ದರು. ಎಂಎಲ್‌ಐ ತಂಡದ ಏಕೈಕ ಗೋಲನ್ನು ವಿಜಯ್ 30ನೇ ನಿಮಿಷದಲ್ಲಿ ತಂದಿತ್ತರು.

ಇನ್ನೊಂದು ಪಂದ್ಯದಲ್ಲಿ ಆರ್ಮಿ ಗ್ರೀನ್ ತಂಡದವರು 4-2 ಗೋಲುಗಳಿಂದ ಎಎಸ್‌ಸಿ ತಂಡವನ್ನು ಮಣಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry