ಹಾಕಿ: ಎಎಸ್‌ಸಿಗೆ ಗೆಲುವು

7

ಹಾಕಿ: ಎಎಸ್‌ಸಿಗೆ ಗೆಲುವು

Published:
Updated:
ಹಾಕಿ: ಎಎಸ್‌ಸಿಗೆ ಗೆಲುವು

ಬೆಂಗಳೂರು: ದೀಪು ತಂದಿತ್ತ ಎರಡು ಗೋಲುಗಳ ನೆರವಿನಿಂದ ಎಎಸ್‌ಸಿ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ಓಜೋನ್‌ಗ್ರೂಪ್ ರಾಜ್ಯ ಸೂಪರ್ ಡಿವಿಷನ್ ಲೀಗ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 4-2 ಗೋಲುಗಳಿಂದ ಎಬಿಎಚ್‌ಎ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 2-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ದೀಪು ಪಂದ್ಯದ 30 ಹಾಗೂ 33ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಟುಟಿ 49ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆಯನ್ನು 3-0ಗೆ ಹೆಚ್ಚಿಸಿಕೊಂಡರು. ಮತ್ತೊಂದು ಗೋಲು 51ನೇ ನಿಮಿಷದಲ್ಲಿ `ಉಡುಗೊರೆ'ಯಾಗಿ ಲಭಿಸಿತು.ಕೊನೆಯಲ್ಲಿ ಮರುಹೋರಾಟ ನಡೆಸಿದ ಎಬಿಎಚ್‌ಎ ತಂಡ ಸರಬ್ಜಿತ್ ಸಿಂಗ್ (53ನೇ ನಿಮಿಷ) ಹಾಗೂ ಮೊಹಮ್ಮದ್ ನಿಜಾಮುದ್ದೀನ್ (58) ಗಳಿಸಿದ ಗೋಲುಗಳ ನೆರವಿನಿಂದ ಸೋಲಿನ ಅಂತರವನ್ನು ತಗ್ಗಿಸಿತು. ಬಿಇಎಂಎಲ್- ಪಿಸಿಟಿಸಿ ಪಂದ್ಯ ಡ್ರಾ: ಬಿಇಎಂಎಲ್ ಮತ್ತು ಪಿಸಿಟಿಸಿ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 1-1 ಗೋಲಿನ ಡ್ರಾದಲ್ಲಿ ಕೊನೆಗೊಂಡಿತು.ಸಿಪ್ರಿಂದ್ ಐಂದ್ ಎಂಟನೇ ನಿಮಿಷದಲ್ಲಿ ಪಿಸಿಟಿಸಿಗೆ ಮುನ್ನಡೆ ತಂದಿತ್ತರೆ, ಕಿರಣ್ 22ನೇ ನಿಮಿಷದಲ್ಲಿ ಬಿಇಎಂಎಲ್‌ಗೆ ಸಮಬಲದ ಗೋಲು ಗಳಿಸಿಕೊಟ್ಟರು. ಎರಡನೇ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಕೆನರಾ ಬ್ಯಾಂಕ್- ಬಿಇಎಂಎಲ್ ಮತ್ತು ಎಎಸ್‌ಸಿ- ಎಂಇಜಿ `ಬಿ' ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry