ಗುರುವಾರ , ಮೇ 13, 2021
17 °C

ಹಾಕಿ: ಎಎಸ್‌ಸಿ ತಂಡಕ್ಕೆ ಸುಲಭ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಎಸ್‌ಸಿ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು 6-2 ಗೋಲುಗಳಿಂದ ಸೋಲಿಸಿದರು.ಅಕ್ಕಿತಿಮ್ಮನ ಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಿಜಯೀ ತಂಡದ ಚಂದನ್ 15ನೇ ನಿ. 21ನೇ ನಿ. ಮತ್ತು 58ನೇ ನಿಮಷಗಳಲ್ಲಿ ತಲಾ ಒಂದು ಗೋಲು ಗಳಿಸಿದರೆ, ಟೆಟೆ ಹಾಗೂ ಮಾಝಿ ಮತ್ತು ಬಿರ್ಸಾ ತಲಾ ಒಂದು ಗೋಲು ತಂದಿತ್ತರು. ಪೊಲೀಸ್ ತಂಡದ ಪರ ಉತ್ತರಾರ್ಧದಲ್ಲಿ ಪ್ರದೀಪ್ ಎರಡು ಗೋಲುಗಳನ್ನು ಗಳಿಸಿದರು.ಆರ್ಮಿ ಗ್ರೀನ್ ತಂಡದ ಆಟಗಾರರು ಇನ್ನೊಂದು ಪಂದ್ಯದಲ್ಲಿ ಎಂಇ.ಜಿ `ಬಿ~ ತಂಡವನ್ನು 7-3 ಗೋಲುಗಳಿಂದ ಸೋಲಿಸಿದರು. ಸೇನಾ ತಂಡದ ಪರ ಅರುಣ್ ಮತ್ತು ರೋಮ್ ತಲಾ 2 ಗೋಲು ಗಳಿಸಿದರೆ, ಜಾನಿ, ಹ್ಯಾಮ್ಲೆಟ್ ಮತ್ತು ವಿನಯ್ ತಲಾ ಒಂದು ಗೋಲು ಗಳಿಸಿದರು.ಮತ್ತೊಂದು ಪಂದ್ಯದಲ್ಲಿ ಸೆಂಟ್ರಲ್ ಎಕ್ಸೈಜ್ ತಂಡವು 3-0 ಗೋಲುಗಳಿಂದ ಎಚ್‌ಎಎಲ್ ತಂಡವನ್ನು ಸುಲಭವಾಗಿಯೇ ಸೋಲಿಸಿತು. ಎಕ್ಸೈಜ್ ಪರ ಪಿ.ಎ.ಅಯ್ಯಪ್ಪ 2 ಮತ್ತು 26ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರೆ, 18ನೇ ನಿಮಿಷದಲ್ಲಿ ಜಯೇಶ್ ಜಾಧವ್ ಇನ್ನೊಂದು ಗೋಲು ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.