ಹಾಕಿ: ಎಚ್‌ಎಎಲ್ ಪರಾಭವ

7

ಹಾಕಿ: ಎಚ್‌ಎಎಲ್ ಪರಾಭವ

Published:
Updated:
ಹಾಕಿ: ಎಚ್‌ಎಎಲ್ ಪರಾಭವ

ಬೆಂಗಳೂರು: ರಾಜ್ಯದ ಪ್ರಮುಖ ತಂಡಗಳಲ್ಲಿ ಒಂದಾದ ಎಚ್.ಎ. ಎಲ್. ತಂಡದವರು ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಯಲ್ಲಿ ಅನಿರೀಕ್ಷಿತ ಸೋಲು ಅನುಭ ವಿಸಿ ಟೂರ್ನಿಯಿಂದ ಹೊರಬಿದ್ದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸೆಂಟ್ರಲ್ ಎಕ್ಸೈಸ್ ತಂಡದವರು 2-0 ಗೋಲುಗಳಿಂದ ಎಚ್.ಎ.ಎಲ್. ತಂಡದ ಮೇಲೆ ಗೆದ್ದು ಮೂರನೇ ಸುತ್ತು ಪ್ರವೇಶಿಸಿದರು. ವಿಜಯಿ ತಂಡದ ನೀಲೇಶ್ (2) ಗೋಲುಗಳಿಸಿ ತಮ್ಮ ತಂಡದ ಗೆಲುವಿನ ರೂವಾರಿ ಆದರು.ಇನ್ನೊಂದು ಪಂದ್ಯದಲ್ಲಿ ಸಿ.ಒ.ಇ. ತಂಡ 1-0 ಗೋಲಿನಿಂದ ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ ಮೇಲೆ ಗೆದ್ದಿತು. ವಿಜಯದ ಗೋಲು ಮನೋಜ್ ಮೂಲಕ ಬಂತು. ನಾಳೆ (ಭಾನುವಾರ) ಮಧ್ಯಾಹ್ನ 4-00ಕ್ಕೆ ಕೆ.ಎಸ್.ಪಿ.-ಆರ್.ಡಬ್ಲ್ಯು.ಎಫ್. ನಡುವೆ ಪಂದ್ಯ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry