ಬುಧವಾರ, ಅಕ್ಟೋಬರ್ 16, 2019
21 °C

ಹಾಕಿ: ಎಬಿಎಚ್‌ಎಗೆ ಜಯ

Published:
Updated:

ಬೆಂಗಳೂರು: ಎಬಿಎಚ್‌ಎ ತಂಡ ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಬಿಎಚ್‌ಎ 6-3ಗೋಲುಗಳಿಂದ ಐಟಿಐ ತಂಡವನ್ನು ಟೈ ಬ್ರೇಕರ್‌ನಲ್ಲಿ ಸೋಲಿಸಿತು.

ನಿಗದಿತ ಅವಧಿಯಲ್ಲಿ ಎರಡೂ ತಂಡದವರು 2-2ಗೋಲುಗಳಿಂದ ಸಮಬಲ ಸಾಧಿಸಿದ್ದರು. ವಿಜಯಿ ತಂಡದ ಬಸಂತ್ ಗಮನಾರ್ಹ ಪ್ರದರ್ಶನ ನೀಡಿದರು. ಈ ಆಟಗಾರ 28 ಹಾಗೂ 48ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರು.

ಇದಕ್ಕೆ ತಕ್ಕ ಪ್ರತಿಸ್ಪರ್ಧೆ ಒಡ್ಡಿದ ಐಟಿಐ ತಂಡದ ಪಾಲ್ ಶೇಷು 9ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ವಿರಾಮದ ಬಳಿಕ ಟಿ.ವಿ. ಪ್ರತೀಕ್ (37ನೇ ನಿಮಿಷ) ಗೋಲು ಗಳಿಸಿ 2-2ರಲ್ಲಿ ಸಮಬಲ ಸಾಧಿಸುವಂತೆ ನೋಡಿಕೊಂಡರು.

Post Comments (+)