ಹಾಕಿ: ಎಸ್‌ಎಐಗೆ ಮಣಿದ ಪಿಸಿಟಿಸಿ

7

ಹಾಕಿ: ಎಸ್‌ಎಐಗೆ ಮಣಿದ ಪಿಸಿಟಿಸಿ

Published:
Updated:
ಹಾಕಿ: ಎಸ್‌ಎಐಗೆ ಮಣಿದ ಪಿಸಿಟಿಸಿ

ಬೆಂಗಳೂರು: ಎಂ.ಬಿ. ಅಯ್ಯಪ್ಪ ತಂದಿತ್ತ ಎರಡು ಗೋಲುಗಳ ನೆರವಿನಿಂದ ಎಸ್‌ಎಐ ತಂಡದವರು ಇಲ್ಲಿ ನಡೆಯುತ್ತಿರುವ 15ನೇ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಸ್‌ಎಐ 4-0 ಗೋಲುಗಳಿಂದ ಪಿಸಿಟಿಸಿ ವಿರುದ್ಧ ಜಯ ಸಾಧಿಸಿತು. ಅಯ್ಯಪ್ಪ 11 ಹಾಗೂ 12ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮಹತ್ವದ ಮುನ್ನಡೆ ತಂದಿತ್ತರು. ಇತರ ಎರಡು ಗೋಲುಗಳನ್ನು ಮನು ಪಾಟೀಲ್ (18) ಮತ್ತು ದರ್ಶನ್ (41) ಗಳಿಸಿದರು.ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಬಿಇಎಂಎಲ್ 2-1 ಗೋಲುಗಳಿಂದ ಸೆಂಟ್ರಲ್ ಎಕ್ಸೈಸ್ ತಂಡವನ್ನು ಮಣಿಸಿತು. ಹರಿ ಗೋವಿಂದ್ 16ನೇ ನಿಮಿಷದಲ್ಲಿ ಬಿಇಎಂಎಲ್‌ಗೆ ಮೇಲುಗೈ ತಂದಿತ್ತರೆ, ಬೋಪಯ್ಯ 38ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.

 

ಮರುಹೋರಾಟ ನಡೆಸಿದ ಸೆಂಟ್ರಲ್ ಎಕ್ಸೈಸ್ ತಂಡ 58ನೇ ನಿಮಿಷದಲ್ಲಿ ಅಜಯ್ ಅಯ್ಯಪ್ಪ ತಂದಿತ್ತ ಗೋಲಿನ ನೆರವಿನಿಂದ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿತು. ಆ ಬಳಿಕ ಎಕ್ಸೈಸ್ ತಂಡ ಸಮಬಲದ ಗೋಲಿಗಾಗಿ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದವು.ದಿನದ ಕೊನೆಯ ಪಂದ್ಯದಲ್ಲಿ ಎಎಸ್‌ಸಿ 3-0 ಗೋಲುಗಳಿಂದ ಆರ್‌ಡಬ್ಲ್ಯುಎಫ್ ವಿರುದ್ಧ ಸುಲಭ ಜಯ ದಾಖಲಿಸಿತು. ಸರಬ್ಜಿತ್ ಸಿಂಗ್ (23 ಮತ್ತು 57ನೇ ನಿ.) ಹಾಗೂ ಚಂದನ್ ಐಂದ್ (10) ವಿಜಯಿ ತಂಡದ ಪರ ಗೋಲು ಗಳಿಸಿದರು.ಬುಧವಾರ ನಡೆಯುವ ಪಂದ್ಯಗಳಲ್ಲಿ ಕೆಎಸ್‌ಪಿ- ಎಂಇಜಿ, ಪಿಸಿಟಿಸಿ- ಎಂಇಜಿ ಬಾಯ್ಸ ಮತ್ತು ಡಿವೈಎಸ್‌ಎಸ್- ಆರ್ಮಿ ಇಲೆವೆನ್ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry