ಹಾಕಿ: ಎಸ್‌ಎಐ ಎ ತಂಡಕ್ಕೆ ಜಯ

7

ಹಾಕಿ: ಎಸ್‌ಎಐ ಎ ತಂಡಕ್ಕೆ ಜಯ

Published:
Updated:
ಹಾಕಿ: ಎಸ್‌ಎಐ ಎ ತಂಡಕ್ಕೆ ಜಯ

ಬೆಂಗಳೂರು: ಎಸ್‌ಎಐ ‘ಎ’ ತಂಡದವರು ಇಲ್ಲಿ ನಡೆಯುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ 6-1 ಗೋಲುಗಳಿಂದ ಕೆನರಾ ಬ್ಯಾಂಕ್ ತಂಡವನ್ನು ಮಣಿಸಿದರು. ಅಕ್ಕಿತಿಮ್ಮಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರಧಾನ್ ಸೋಮಣ್ಣ (45 ಮತ್ತು 54ನೇ ನಿಮಿಷ), ಎಸ್.ಕೆ. ಉತ್ತಪ್ಪ (34 ಮತ್ತು 47ನೇ ನಿ.), ದೀಪಕ್ (32) ಮತ್ತು ಪೂಣಚ್ಚ (60) ಅವರು ಎಸ್‌ಎಐ ಪರ ಗೋಲು ಗಳಿಸಿದರು. ಕೆನರಾ ಬ್ಯಾಂಕ್ ಪರ ರೊನಾಲ್ಡ್ ಕಿರಣ್ (6) ಗೋಲು ತಂದಿತ್ತರು.ಮತ್ತೊಂದು ಪಂದ್ಯದಲ್ಲಿ ಎಂಇಜಿ 2-0 ಗೋಲುಗಳಿಂದ ಎಎಸ್‌ಸಿ ವಿರುದ್ಧ ಜಯ ಪಡೆಯಿತು. ಮುತ್ತಣ್ಣ (51) ಮತ್ತು ಸಿರಾಜ್ (69) ಅವರು ಗೋಲು ಗಳಿಸಿ ಎಂಇಜಿ ಗೆಲುವಿಗೆ ಕಾರಣರಾದರು.

ಭಾನುವಾರ ನಡೆಯುವ ಪಂದ್ಯಗಳಲ್ಲಿ ಕೆನರಾ ಬ್ಯಾಂಕ್- ಎಎಸ್‌ಸಿ ಮತ್ತು ಎಸ್‌ಎಐ ‘ಎ’ - ಎಂಇಜಿ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry