ಶನಿವಾರ, ಡಿಸೆಂಬರ್ 14, 2019
25 °C

ಹಾಕಿ: ಎಸ್‌ಎಐ ತಂಡದ ಮಡಿಲಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಎಸ್‌ಎಐ ತಂಡದ ಮಡಿಲಿಗೆ ಪ್ರಶಸ್ತಿ

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡದವರು ಇಲ್ಲಿ ಮುಕ್ತಾಯಗೊಂಡ ಡಿ.ಎಸ್. ಮೂರ್ತಿ ಹಾಗೂ ವಿ. ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯಲ್ಲಿ 4-1ಗೋಲುಗಳಿಂದ ಡಿವೈಎಸ್‌ಎಸ್ ತಂಡವನ್ನು ಮಣಿಸಿ ಚಾಂಪಿಯನ್ ಆದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ ವಿಜಯಿ ತಂಡದ ದರ್ಶನ್ 4ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ ಮೂರು ನಿಮಿಷದ ನಂತರ ಮತ್ತೊಂದು ಗೋಲು ಇದೇ ಆಟಗಾರನಿಂದ ಬಂತು.ನಂತರ ಮನು ಪಾಟೀಲ್ ಹಾಗೂ ನಿಕಿನ್ ತಿಮ್ಮಯ್ಯ ಕ್ರಮವಾಗಿ 33 ಮತ್ತು 54ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು. ಡಿವೈಎಸ್‌ಎಸ್ ತಂಡದ ಏಕೈಕ ಗೋಲನ್ನು ಕುಶ 52ನೇ ನಿಮಿಷದಲ್ಲಿ ತಂದಿಟ್ಟರು.ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಬಿಇಎಂಎಲ್ ತಂಡ 3-2ಗೋಲುಗಳಿಂದ ಎಚ್‌ಎಎಲ್ ತಂಡವನ್ನು ಸೋಲಿಸಿತು.ವೈಯಕ್ತಿಕ ಪ್ರಶಸ್ತಿಗಳು: ಜಗದೀಪ್ ದಯಾಳ್ (ಬೆಸ್ಟ್ ಗೋಲ್ ಕೀಪರ್), ಬಸಂತ್ ಟರ್ಕಿ (ಬೆಸ್ಟ್ ಬ್ಯಾಕ್), ನಾಗಸೇನಿ (ಬೆಸ್ಟ್ ಹಾಫ್) ಮತ್ತು ಕುಶ (ಬೆಸ್ಟ್ ಫಾರ್ವಡ್). ದರ್ಶನ್ (ಟೂರ್ನಿಯ ಶ್ರೇಷ್ಠ ಆಟಗಾರ).

ಪ್ರತಿಕ್ರಿಯಿಸಿ (+)