ಗುರುವಾರ , ಮೇ 19, 2022
24 °C

ಹಾಕಿ: ಎಸ್‌ಎಐ ಬಿ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚುರುಕಾದ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) `ಬಿ~ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಸ್‌ಎಐ `ಬಿ~ ತಂಡ 4-1ಗೋಲುಗಳಿಂದ ಆರ್‌ಬಿಐ ತಂಡವನ್ನು ಮಣಿಸಿತು.

ವಿಜಯಿ ತಂಡದ ಪ್ರಮೋದ್ 14ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಬಿದ್ದಪ್ಪ (22), ಫರ‌್ಹಾನ್ (42) ಹಾಗೂ ಶಿವಮಣಿ (45) ಗೋಲು ಕಲೆ ಹಾಕಿ ಗಮನ ಸೆಳೆದರು. ಆರ್‌ಬಿಐ ತಂಡದ ಏಕೈಕ ಗೋಲನ್ನು ಗಿಲಾನಿ (11ನೇ ನಿಮಿಷ) ತಂದಿತ್ತರು.

ದಿನದ ಇನ್ನೊಂದು ಪಂದ್ಯದಲ್ಲಿ ಬಿಇಎಂಎಲ್ 4-2ಗೋಲುಗಳಿಂದ ಡಿವೈಎಸ್‌ಎಸ್ ತಂಡವನ್ನು ಮಣಿಸಿತು. ಕಲ್ಲಪ್ಪ (6), ನಾಗಲಿಂಗೇಶ ಸ್ವಾಮಿ (46) ತಲಾ ಒಂದು ಗೋಲು ಕಲೆ ಹಾಕಿದರೆ, ರಮೇಶ್ 54 ಹಾಗೂ 58ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿ ಬಿಇಎಂಎಲ್ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

ಮಂಗಳವಾರದ ಪಂದ್ಯಗಳು: ಹುಬ್ಬಳ್ಳಿಯ ಎಸ್‌ಡಬ್ಲ್ಯುಆರ್-ಬಿಇಎಂಎಲ್ (ಮಧ್ಯಾಹ್ನ 2.30), ಎಸ್‌ಎಐ-ಡಿವೈಎಸ್‌ಎಸ್ (ಸಂಜೆ 4.0).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.