ಮಂಗಳವಾರ, ಮೇ 11, 2021
20 °C

ಹಾಕಿ: ಏರ್ ಇಂಡಿಯಾಕ್ಕೆ ಸುಲಭ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಏರ್‌ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್~ನ ಪಂದ್ಯದಲ್ಲಿ ಎಂ.ಇ.ಜಿ. ತಂಡವನ್ನು 6-0 ಗೋಲುಗಳಿಂದ ಸುಲಭವಾಗಿ ಸೋಲಿಸಿದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವಿಜಯೀ ತಂಡ ವಿರಾಮದ ವೇಳೆಗೆ 4-0 ಗೋಲುಗಳಿಂದ ಮುಂದಿತ್ತು.ಇನ್ನೊಂದು ಪಂದ್ಯದಲ್ಲಿ ಬಿಪಿಸಿಎಲ್ ತಂಡದವರು 4-2 ಗೋಲುಗಳಿಂದ ಭಾರತ ಕ್ರೀಡಾ ಪ್ರಾಧಿಕಾರ ತಂಡವನ್ನು ಸೋಲಿಸಿದರು. ಬಿಪಿಸಿಎಲ್ ಪರ ಅಮೀರ್ ಖಾನ್ (30ನೇ ನಿ.), ವರುಣ್ (32), ಹರಿಪ್ರಸಾದ್ (39) ಮತ್ತು ಜರ್ನೇಲ್ ಸಿಂಗ್ (50ನೇ ನಿ.) ಗೋಲು ಗಳಿಸಿದರು.  ಭಾರತ ಕ್ರೀಡಾ ಪ್ರಾಧಿಕಾರದ ಪರ ದರ್ಶನ್ 16ನೇ ಮತ್ತು 57ನೇ ನಿಮಿಷಗಳಲ್ಲಿ ತಲಾ ಒಂದು ಗೋಲು ಗಳಿಸಿದರು.ಇಂದಿನ ಪಂದ್ಯಗಳು: ಏರ್‌ಇಂಡಿಯ -ಪಿಎನ್‌ಬಿ (ಮಧ್ಯಾಹ್ನ 3.00ಕ್ಕೆ), ಒಎನ್‌ಜಿಸಿ- ಆರ್ಮಿ ರೆಡ್ (ಸಂಜೆ 4.30ಕ್ಕೆ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.