ಶುಕ್ರವಾರ, ಡಿಸೆಂಬರ್ 6, 2019
25 °C

ಹಾಕಿ: ಏರ್ ಇಂಡಿಯಾ ಚಾಂಪಿಯನ್

Published:
Updated:
ಹಾಕಿ: ಏರ್ ಇಂಡಿಯಾ ಚಾಂಪಿಯನ್

ಬೆಂಗಳೂರು: ಏರ್ ಇಂಡಿಯಾ ತಂಡದವರು ಇಲ್ಲಿ ಕೊನೆಗೊಂಡ ‘ಓಜೋನ್ ಗ್ರೂಪ್’ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಏರ್ ಇಂಡಿಯಾ 2-1 ಗೋಲುಗಳಿಂದ ಆರ್ಮಿ ರೆಡ್ ತಂಡವನ್ನು ಮಣಿಸಿತು. ಈ ಮೂಲಕ ಆಡಿದ 10 ಪಂದ್ಯಗಳಿಂದ ಒಟ್ಟು 27 ಪಾಯಿಂಟ್ ಕಲೆಹಾಕುವ ಮೂಲಕ ಏರ್ ಇಂಡಿಯಾ ಅಗ್ರಸ್ಥಾನ ಪಡೆಯಿತು. ಮಾತ್ರವಲ್ಲ ಟ್ರೋಫಿಯೊಂದಿಗೆ ಎರಡು ಲಕ್ಷ ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿತು.26 ಪಾಯಿಂಟ್ ಸಂಗ್ರಹಿಸಿದ ಬಿಪಿಸಿಎಲ್ ರನ್ನರ್ ಅಪ್ ಸ್ಥಾನದೊಂದಿಗೆ 1.50 ಲಕ್ಷ ರೂ. ಬಹುಮಾನ ಗೆದ್ದಕೊಂಡಿತು. ಮೂರನೇ ಸ್ಥಾನ ಪಡೆದ ಐಒಸಿಎಲ್ (25 ಪಾಯಿಂಟ್) ಒಂದು ಲಕ್ಷ ರೂ. ನಗದು ಬಹುಮಾನ ಪಡೆಯಿತು.ಚಾಂಪಿಯನ್‌ಪಟ್ಟ ಲಭಿಸಬೇಕಾದರೆ ಏರ್ ಇಂಡಿಯಾ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಗೆಲುವು ಅಗತ್ಯವಾಗಿತ್ತು. ಯುವರಾಜ್ ವಾಲ್ಮೀಕಿ (26ನೇ ನಿಮಿಷ) ಮತ್ತು ಶಿವೇಂದರ್ ಸಿಂಗ್ (38) ಅವರು ಗೋಲು ಗಳಿಸಿ ತಂಡದ ಜಯಕ್ಕೆ ಕಾರಣರಾದರು.

ಪ್ರತಿಕ್ರಿಯಿಸಿ (+)