ಹಾಕಿ: ಏರ್ ಇಂಡಿಯಾ ಜಯಭೇರಿ

6

ಹಾಕಿ: ಏರ್ ಇಂಡಿಯಾ ಜಯಭೇರಿ

Published:
Updated:
ಹಾಕಿ: ಏರ್ ಇಂಡಿಯಾ ಜಯಭೇರಿ

ಬೆಂಗಳೂರು: ಲೆನ್ ಅಯ್ಯಪ್ಪ ಅವರು ತಂದಿತ್ತ ಮೂರು ಗೋಲುಗಳ ನೆರವಿನಿಂದ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ‘ಓಜೋನ್ ಗ್ರೂಪ್’ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.



ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ 5-1 ಗೋಲುಗಳಿಂದ ಎಂಎಲ್‌ಐ ತಂಡವನ್ನು ಮಣಿಸಿತು.

ಲೆನ್ ಅಯ್ಯಪ್ಪ ಅವರು 33, 53 ಮತ್ತು 63ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ತಂಡದ ಇನ್ನೆರಡು ಗೋಲುಗಳನ್ನು ಸಮೀದ್ ದಾದ್ (6) ಹಾಗೂ ಶಿವೇಂದರ್ ಸಿಂಗ್ (44) ತಂದಿತ್ತರು. ಎಂಎಲ್‌ಐಗೆ ಸುನಿಲ್ ಕುಮಾರ್ (60) ಗೋಲು ಗಳಿಸಿದರು.



ದಿನದ ಮತ್ತೊಂದು ಪಂದ್ಯದಲ್ಲಿ ಬಿಪಿಸಿಎಲ್ ತಂಡ 3-1 ಗೋಲುಗಳಿಂದ ಫೋರ್ಟಿಸ್ ವಿರುದ್ಧ ಜಯ ಸಾಧಿಸಿತು. ಗುರ್‌ಪ್ರೀತ್ ಸಿಂಗ್ (25ನೇ ನಿ.), ಅಮರ್ ಅಯ್ಯಮ್ಮ (36) ಮತ್ತು ಶೇರ್ ಸಿಂಗ್ (62) ಅವರು ಬಿಪಿಸಿಎಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಫೋರ್ಟಿಸ್ ತಂಡದ ಪರ ಏಕೈಕ ಗೋಲನ್ನು ದಾಮನ್‌ದೀಪ್ ಸಿಂಗ್ (5) ಗಳಿಸಿದರು. ಬುಧವಾರ ನಡೆಯುವ ಪಂದ್ಯಗಳಲ್ಲಿ ನಾಮಧಾರಿ ಇಲೆವೆನ್- ಎಎಸ್‌ಸಿ, ಏರ್ ಇಂಡಿಯಾ- ಎಂಇಜಿ ಮತ್ತು ಎಸ್‌ಎಐ- ಬಿಪಿಸಿಎಲ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry