ಶುಕ್ರವಾರ, ನವೆಂಬರ್ 22, 2019
26 °C

ಹಾಕಿ: ಐಒಸಿಎಲ್‌ಗೆ ಗೆಲುವು

Published:
Updated:
ಹಾಕಿ: ಐಒಸಿಎಲ್‌ಗೆ ಗೆಲುವು

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್‌ನ ಶನಿವಾರದ ಪಂದ್ಯದಲ್ಲಿ 5-2ಗೋಲುಗಳಿಂದ ಭಾರತ ಕ್ರೀಡಾ ಪ್ರಾಧಿಕಾರ ತಂಡವನ್ನು ಮಣಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐಒಸಿಎಲ್ ಪಂದ್ಯದ ಆರಂಭದಿಂದಲೇ ಗೋಲುಗಳನ್ನು ಕಲೆ ಹಾಕಿತು. ವಿಜಯಿ ತಂಡದ ಗುಣಶೇಖರ್ 10ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು, 41ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ತಂದಿತ್ತರು.ಈ ತಂಡದ ಇನ್ನುಳಿದ ಗೋಲುಗಳನ್ನು ಸುನಿಲ್ (11ನೇ ನಿಮಿಷ), ದೀಪಕ್ ಠಾಕೂರ್ (36 ಹಾಗೂ 39ನೇ ನಿ.) ಗಳಿಸಿದರು. ಕ್ರೀಡಾ ಪ್ರಾಧಿಕಾರದ ನಿಕಿನ್ ತಿಮ್ಮಯ್ಯ 44 ಹಾಗೂ 64ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿ ಮರು ಹೋರಾಟ ತೋರಿದರಾದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.ಎಂಇಜಿಗೆ ನಿರಾಸೆ: ದಿನದ ಇನ್ನೊಂದು ಪಂದ್ಯದಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) 3-6ಗೋಲುಗಳಿಂದ ನಾಮಧಾರಿ ಎದುರು ಸೋಲು ಕಂಡಿತು.ಈ ಟೂರ್ನಿಯಲ್ಲಿ ಮೊದಲ ಸಲ ಆಡುತ್ತಿರುವ ನಾಮಧಾರಿ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಈ ತಂಡದ ದಿಬಾಗ್ ಸಿಂಗ್ 3ನೇ ನಿಮಿಷದಲ್ಲಿ ಗೋಲು ಕಲೆ ಹಾಕಿ ಆರಂಭಿಕ ಮುನ್ನಡೆ ಗಳಿಸಿಕೊಟ್ಟರು. ಹರ್‌ದೀಪ್ ಸಿಂಗ್ (6ನೇ ನಿ.), ಗುರ್ಮಖ್ ಸಿಂಗ್ (22ನೇ ನಿ.), ಗುರೀಂದರ್ ಸಿಂಗ್ (35ನೇ ನಿ.), ಕರ್ಣಜಿತ್ ಸಿಂಗ್ (62ನೇ ನಿ.) ಗೋಲುಗಳನ್ನು ಗಳಿಸಿ ನಾಮಧಾರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಗಾಯ: ನಾಮಧಾರಿ ತಂಡದ ಹರದೀಪ್ ಸಿಂಗ್ ಹೊಡೆದ ಚೆಂಡನ್ನು ತಡೆಯಲು ಮುಂದಾದ ಎಂಇಜಿಯ ಕಿರಣ್ ಕುಂಜಪ್ಪ ಅವರಿಗೆ ಸ್ಟಿಕ್‌ನಿಂದ ಬಲವಾಗಿ ಪೆಟ್ಟು ಬಿತ್ತು. ನಂತರ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಭಾನುವಾರದ ಪಂದ್ಯಗಳು: ಬಿಪಿಸಿಎಲ್-ಫೋರ್ಟಿಸ್ (ಸಂಜೆ 4.30), ಪಿಎನ್‌ಬಿ-ಏರ್ ಇಂಡಿಯಾ (ಸಂಜೆ 6ಕ್ಕೆ)

ಪ್ರತಿಕ್ರಿಯಿಸಿ (+)