ಶುಕ್ರವಾರ, ನವೆಂಬರ್ 22, 2019
26 °C

ಹಾಕಿ: ಐಒಸಿಎಲ್ ತಂಡ ಜಯಭೇರಿ

Published:
Updated:

ಬೆಂಗಳೂರು: ಮಾಜಿ ಚಾಂಪಿಯನ್ ಐಒಸಿಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಟೂರ್ನಿಯಲ್ಲಿ ಜಯ ಗಳಿಸಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಐಒಸಿಎಲ್ 8-3 ಗೋಲುಗಳಿಂದ ಫೋರ್ಟಿಸ್ ತಂಡವನ್ನು ಪರಾಭವಗೊಳಿಸಿತು. ಅಮೋಘ ಪ್ರದರ್ಶನ ತೋರಿದ ಈ ತಂಡದವರು ವಿರಾಮದ ವೇಳೆ 5-0 ಗೋಲುಗಳ ಮುನ್ನಡೆ ಸಾಧಿಸಿ ಪಾರಮ್ಯ ಮೆರೆದರು.ಐಒಸಿಎಲ್‌ನ ಗುಣಶೇಖರ್ (13ನೇ, 28ನೇ ನಿಮಿಷ), ರೋಶನ್ ಮಿಂಜ್ (14ನೇ ನಿ.), ದೀಪಕ್ ಠಾಕೂರ್ (20ನೇ ನಿ.), ಭರತ್ ಚಿಕಾರ (22ನೇ ಹಾಗೂ 45ನೇ ನಿ.), ವಿಕಾಸ್ ಶರ್ಮ (48ನೇ ನಿ.) ಹಾಗೂ ದಿದಾರ್ ಸಿಂಗ್ (59ನೇ ನಿ.) ಗೋಲು ಗಳಿಸಿದರು. ಫೋರ್ಟಿಸ್ ತಂಡದ ಒಸಾಫ್ ರೆಹಮಾನ್ (38ನೇ ಹಾಗೂ 40ನೇ ನಿ.), ಪ್ರವೀಣ್ (54ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಮತ್ತೊಂದು ಪಂದ್ಯದಲ್ಲಿ ಏರ್ ಇಂಡಿಯಾ 2-1 ಗೋಲುಗಳಿಂದ ನಾಮಧಾರಿ ತಂಡವನ್ನು ಮಣಿಸಿತು. ಬಿಪಿಸಿಎಲ್ ಹಾಗೂ ಎಂಇಜಿ ನಡುವಿನ ಪಂದ್ಯ 3-3 ಗೋಲುಗಳಿಂದ ಡ್ರಾನಲ್ಲಿ ಕೊನೆಗೊಂಡಿತು.

ಪ್ರತಿಕ್ರಿಯಿಸಿ (+)