ಭಾನುವಾರ, ಏಪ್ರಿಲ್ 11, 2021
21 °C

ಹಾಕಿ: ಐಟಿಐಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಟಿಐ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ಡಿ.ಎಸ್.ಮೂರ್ತಿ ಮತ್ತು ವಿ.ಕರುಣಾಕರನ್ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಐಟಿಐ ತಂಡದವರು 7-2 ಗೋಲುಗಳಿಂದ ಬ್ಲೂ ಸ್ಟಾರ್ ಹಾಕಿ ಕ್ಲಬ್ ತಂಡವನ್ನು ಸೋಲಿಸಿದ್ದಾರೆ.ವಿಜಯಿ ತಂಡದವರು ವಿರಾಮದ ವೇಳೆಗೆ 5-1 ಗೋಲಿನಿಂದ ಮುಂದಿದ್ದರು. ಐಟಿಐ ತಂಡದ ಮುತ್ತಣ್ಣ (2ನೇ, 21ನೇ ನಿಮಿಷ), ಸೆಬಾಸ್ಟಿಯನ್ 12ನೇ, 13ನೇ, 56ನೇ ನಿ.) ಹಾಗೂ ಸೋಮಯ್ಯ (34ನೇ, 43ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಪರಾಭವಗೊಂಡ ಬ್ಲೂ ಸ್ಟಾರ್ ತಂಡದ  ಪಿ.ಜಿ.ಬೋಪಣ್ಣ (4ನೇ ನಿ.) ಹಾಗೂ ಮಂದಣ್ಣ (44ನೇ ನಿ.) ಅವರು ಗೋಲು ಗಳಿಸಿದರು. ಶುಕ್ರವಾರ 4.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಎಎಸ್‌ಸಿ ಬಾಯ್ಸೆ ಹಾಗೂ ನವೀನ್ ಹಾಕಿ ಕ್ಲಬ್ ಪೈಪೋಟಿ ನಡೆಸಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.