ಹಾಕಿ: ಐಟಿಐ ತಂಡಕ್ಕೆ ಗೆಲುವು

6

ಹಾಕಿ: ಐಟಿಐ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಅಂತಿಮ ಕ್ಷಣಗಳಲ್ಲಿ ಸೋಮಣ್ಣ ತಂದಿತ್ತ ಎರಡು ಗೋಲು ಗಳ ನೆರವಿನಿಂದ ಐಟಿಐ ತಂಡದವರು ಕೆಎಸ್‌ಎಚ್‌ಎ ರಾಜ್ಯ ‘ಎ’ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಂಪಾದಿಸಿದರು.ಕೆಎಸ್‌ಎಚ್‌ಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಐಟಿಐ ತಂಡ 3–2 ಗೋಲುಗಳಿಂದ ಎಸ್‌.ಬಿ.ಎಂ ಜೈನ್‌ ಕಾಲೇಜು ತಂಡವನ್ನು ಮಣಿಸಿತು.ಐಟಿಐ ಪರ ಸುರೇಂದ್ರ (24ನೇ  ನಿಮಿಷ) ಮತ್ತು ಸೋಮಣ್ಣ (36,49) ಗೋಲು ಗಳಿಸಿದರೆ, ಎಸ್‌ಬಿಎಂ ಜೈನ್‌ ಕಾಲೇಜು ತಂಡದ ಪರ ಗೌತಮ್ (28) ಮತ್ತು ಹಸನ್ ಬಾಷಾ (30) ತಲಾ ಒಂದು ಗೋಲು ಸಂಪಾದಿಸಿದರು.ಎರಡನೇ ಪಂದ್ಯದಲ್ಲಿ ಡಿವೈಇಎಸ್‌ ‘ಬಿ’ ತಂಡ 6–2ರಲ್ಲಿ ಬೆಳಗಾವಿ ಜಿಲ್ಲಾ ತಂಡವನ್ನು ಸುಲಭವಾಗಿ ಸೋಲಿಸಿತು.ತಂಡದ ಪರ  ಭರತ್ (21), ಸಂತೋಷ್ (42, 44), ಮಹೇಶ್.ಎಸ್‌ ಮುದ್‌ಕರ್ (48, 58) ಹಾಗೂ ಶಶಾಂಕ್ (49) ಗೋಲು ಗಳಿಸಿ ಮಿಂಚಿದರೆ, ಬೆಳಗಾವಿ ಪರ ಸಚಿನ್ ಪವಾರ್ (41, 46) ಎರಡು ಗೋಲು ಬಾರಿಸಿ ಏಕಾಂಗಿ ಹೋರಾಟ ನಡೆಸಿದರು.ಎಎಸ್‌ಸಿ ಬಾಯ್ಸ್ ಮತ್ತು ಬಿಎಸ್‌ ಎನ್‌ಎಲ್ ನಡುವೆ ನಡೆದ ಮೂರನೇ ಪಂದ್ಯ 2–2 ರಲ್ಲಿ ಡ್ರಾ ಕಂಡಿತು.ಬುಧವಾರ ನಡೆಯುವ ಪಂದ್ಯದಲ್ಲಿ ಬೆಳಗಾವಿ ಜಿಲ್ಲಾ ತಂಡ ಹಾಗೂ ಎಂಇಜಿ ಬಾಯ್ಸ್ ತಂಡಗಳು ಪೈಪೋಟಿ ನಡೆಸಲಿವೆ.ಚಿನ್ಮಯಿ ವಿದ್ಯಾಲಯಕ್ಕೆ ಜಯ: ಮಂಗಳವಾರ ನಡೆದ ಅಂತರ ಶಾಲಾ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಚಿನ್ಮಯಿ ವಿದ್ಯಾಲಯ 3–0 ಗೋಲು ಗಳಿಂದ ಬ್ರೈಟ್ ಶಾಲೆ ಎದುರು  ಸುಲಭವಾಗಿ ಗೆಲುವು ಪಡೆಯಿತು.ತಂಡದ ಪರ ಅಪ್ಸಾನ (9) ಹಾಗೂ ಸ್ವಾತಿ (19, 22)ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry