ಗುರುವಾರ , ಮೇ 13, 2021
16 °C

ಹಾಕಿ: ಒಎನ್‌ಜಿಸಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಎನ್‌ಜಿಸಿ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್~ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಒಎನ್‌ಜಿಸಿ 6-2 ಗೋಲುಗಳಿಂದ ಎಂಇಜಿ `ಎ~ ತಂಡವನ್ನು ಮಣಿಸಿತು. ಕೆ.ಎಚ್. ಜಯಂತ (8ನೇ ನಿಮಿಷ), ಪ್ರಮೋದ್ ಕುಮಾರ್ (9), ರಮಣ್‌ದೀಪ್ ಸಿಂಗ್ (16 ಮತ್ತು 37), ಐಜಬ್ ಎಕ್ಕಾ (41) ಮತ್ತು ಲಲಿತ್ ಉಪಾಧ್ಯ (54) ವಿಜೇತ ತಂಡದ ಪರ ಗೋಲು ಗಳಿಸಿದರು. ಎಂಇಜಿ ತಂಡದ ಎರಡೂ ಗೋಲುಗಳನ್ನು ರಮಾಶಂಕರ್ ಪಂದ್ಯದ 61 ಮತ್ತು 70ನೇ ನಿಮಿಷದಲ್ಲಿ ತಂದಿತ್ತರು.ಆರ್ಮಿ ಗ್ರೀನ್ 3-2 ರಲ್ಲಿ ಏರ್ ಇಂಡಿಯಾ ವಿರುದ್ಧ ಜಯ ಪಡೆಯಿತು. ಜುಲ್ತಾನ್ ಲುಗುನ್ (66), ರೋಮೆನ್ (67) ಮತ್ತು ಜಾನಿ ಜಸ್ರೋಷಿಯಾ ಅವರು ಆರ್ಮಿ ಗ್ರೀನ್ ತಂಡಕ್ಕೆ ಗೋಲು ಗಳಿಸಿದರೆ, ದೇವಿಂದರ್ ವಾಲ್ಮೀಕಿ (4) ಹಾಗೂ ಅರ್ಜುನ್ ಹಾಲಪ್ಪ (32) ಏರ್ ಇಂಡಿಯಾದ ಸೋಲಿನ ಅಂತರ ತಗ್ಗಿಸಿದರು.ದಿನದ ಮತ್ತೊಂದು ಪಂದ್ಯದಲ್ಲಿ ನಿಕಿನ್ ತಿಮ್ಮಯ್ಯ (16) ಮತ್ತು ಸಂದೀಪ್ (49) ತಂದಿತ್ತ ಗೋಲುಗಳ ನೆರವಿನಿಂದ ಎಸ್‌ಎಐ 2-1 ರಲ್ಲಿ ಪಿಎನ್‌ಬಿ ವಿರುದ್ಧ ಜಯ ಪಡೆಯಿತು. ದಮನ್‌ದೀಪ್ ಸಿಂಗ್ (3) ಪಿಎನ್‌ಬಿ ಪರ ಚೆಂಡನ್ನು ಗುರಿ ಸೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.