ಹಾಕಿ: ಕರ್ನಾಟಕಕ್ಕೆ ಗೆಲುವು

7

ಹಾಕಿ: ಕರ್ನಾಟಕಕ್ಕೆ ಗೆಲುವು

Published:
Updated:

ಭೋಪಾಲ್ (ಪಿಟಿಐ): ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಎರಡನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ 15-0 ಗೋಲುಗಳಿಂದ ಪುದುಚೇರಿ ತಂಡವನ್ನು ಮಣಿಸಿತು. ವಿಜಯಿ ತಂಡದ ಚೈತ್ರಾ (10ನೇ, 24ನೇ, 32ನೇ, 33ನೇ ನಿಮಿಷ), ತೃಪ್ತಿ (13ನೇ ನಿ.), ಮುನಿರತ್ನಮ್ಮ (18ನೇ, 23ನೇ ನಿ.), ಬಾಲತಿಮ್ಮನಹಳ್ಳಿ (27ನೇ, 55ನೇ, 56ನೇ ನಿ.) ರಶ್ಮಿ (26ನೇ, 34ನೇ, 51ನೇ ನಿ.) ಹಾಗೂ ಸರಿಯಾ ದಸ್ತಗಿರ್ (38ನೇ ನಿ, 62ನೇ ನಿ.) ಗೋಲು ಗಳಿಸಿದರು.ಮುಂದಿನ ಪಂದ್ಯದಲ್ಲಿ ಕರ್ನಾಟಕ ತಂಡದವರು ಚಂಡೀಗಡ ಎದುರು ಪೈಪೋಟಿ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry