ಭಾನುವಾರ, ನವೆಂಬರ್ 17, 2019
28 °C

ಹಾಕಿ: ಕರ್ನಾಟಕಕ್ಕೆ ಭರ್ಜರಿ ಗೆಲುವು

Published:
Updated:

ಹಾಕಿ: ಕರ್ನಾಟಕಕ್ಕೆ ಭರ್ಜರಿ ಗೆಲುವು

ಚೆನ್ನೈ (ಪಿಟಿಐ)
: ಕರ್ನಾಟಕದ ಜೂನಿಯರ್ ಮಹಿಳೆಯರ ಹಾಕಿ ತಂಡವು `ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್‌ಷಿಪ್'ನ ಸೋಮವಾರದ ಪಂದ್ಯದಲ್ಲಿ 24-0ಯಿಂದ ತ್ರಿಪುರಾ ತಂಡದ ವಿರುದ್ಧ ಗೆಲುವು ಗಳಿಸಿತು.ಇದಕ್ಕೂ ಮೊದಲು ರಾಜ್ಯದ  ಜೂನಿಯರ್ ಮಹಿಳೆಯರು 9-0ಯಿಂದ ಆತಿಥೇಯರನ್ನು ಮಣಿಸಿದ್ದರು. ಆ ಪಂದ್ಯದಲ್ಲಿ ರಾಜ್ಯದ ಪರ ಸ್ಫೂರ್ತಿ ಎಚ್.ಪಿ ನಾಲ್ಕು ಗೋಲು ಸಿಡಿಸಿದ್ದರು.ಹಾಕಿ: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ

ಲಖನೌ (ಪಿಟಿಐ)
: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ `ಮೂರನೇ ಹಾಕಿ ಇಂಡಿಯಾ ಸೀನಿಯರ್ ಮಹಿಳೆಯರ     ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್'ನ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.ಇಲ್ಲಿನ ಗುರು ಗೋವಿಂದ್ ಸಿಂಗ್ ಕಾಲೇಜಿನ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ `ಜಿ' ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು 2-1ರಿಂದ ಒಡಿಶಾ      ತಂಡದ ವಿರುದ್ಧ ಗೆಲುವು         ಕಂಡಿತು.

ರಾಜ್ಯ ತಂಡದ ಪರ ಚೈತ್ರಾ ಎರಡು ಗೋಲು (12ನೇ ಮತ್ತು 22ನೇ ನಿಮಿಷ) ಬಾರಿಸಿದರು. ಒಡಿಶಾ ಪರ ರೈನಾ ಯಾದವ್ ಏಕೈಕ ಗೋಲು (26ನೇ ನಿಮಿಷ) ಗಳಿಸಿದರು.ರೈಲ್ವೇಸ್ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಪ್ರತಿಕ್ರಿಯಿಸಿ (+)