ಹಾಕಿ: ಕರ್ನಾಟಕ ತಂಡಕ್ಕೆ ಜಯ

7

ಹಾಕಿ: ಕರ್ನಾಟಕ ತಂಡಕ್ಕೆ ಜಯ

Published:
Updated:

ಸೋನೆಪತ್ (ಪಿಟಿಐ): ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಆಶ್ರಯದ ಎರಡನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದ್ದಾರೆ.ಶುಕ್ರವಾರ ನಡೆದ `ಡಿ~ ಗುಂಪಿನ ಪಂದ್ಯದಲ್ಲಿ ಕರ್ನಾಟಕ 17-0 ಗೋಲುಗಳಿಂದ ಪುದುಚೇರಿ ತಂಡವನ್ನು ಮಣಿಸಿತು. ಎ.ಕೆ.ರಂಜಿತಾ, ಬಿ.ಎಂ.ಕೋಮಲಾ (ತಲಾ 3 ಗೋಲು), ಸುಮನ್, ಎಂ.ಜೆ.ನಿಶ್ಚಿತಾ, ಬಿ.ಪಿ.ನಂದಿನಿ (ತಲಾ 2 ಗೋಲು), ಎಚ್.ಪಿ.ಸಂಧ್ಯಾ, ಸಿ.ಎಂ.ಭಾಗ್ಯಶ್ರೀ ಹಾಗೂ ಎಸ್.ಪಿ.ಭವ್ಯಾ ತಲಾ ಒಂದು ಗೋಲು ಗಳಿಸಿದರು.ಕರ್ನಾಟಕ ತಂಡದವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಶನಿವಾರ ಒಡಿಶಾ ಎದುರು ಆಡಲಿದ್ದಾರೆ. ಒಡಿಶಾ ತಂಡದವರು ಮತ್ತೊಂದು ಪಂದ್ಯದಲ್ಲಿ 31-0 ಗೋಲುಗಳಿಂದ ಗುಜರಾತ್ ಎದುರು ಗೆದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry