ಹಾಕಿ: ಕಾವೇರಿ ಕ್ಲಬ್‌ ತಂಡಕ್ಕೆ ಭಾರಿ ಗೆಲುವು

7

ಹಾಕಿ: ಕಾವೇರಿ ಕ್ಲಬ್‌ ತಂಡಕ್ಕೆ ಭಾರಿ ಗೆಲುವು

Published:
Updated:

ಬೆಂಗಳೂರು: ಸುಜಯ್‌ ಮತ್ತು ಸತ್ಯ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಕಾವೇರಿ ಸ್ಪೋರ್ಟ್ಸ್‌ ಕ್ಲಬ್‌ ತಂಡ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಸಾಧಿಸಿತು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕಾವೇರಿ ಕ್ಲಬ್‌ 20–0 ಗೋಲುಗಳಿಂದ ಹಂಪಿನಗರ ಹಾಕಿ ಕ್ಲಬ್‌ ತಂಡವನ್ನು ಮಣಿಸಿತು.ಸುಜಯ್‌ (2, 7, 21, 22, 30ನೇ ನಿಮಿಷ) ಮತ್ತು ಸತ್ಯ (31, 34, 35, 39, 40) ತಲಾ ಐದು ಗೋಲುಗಳನ್ನು ತಂದಿತ್ತರು. ಕಿರಣ್‌ ಮಾದಯ್ಯ (10, 18, 28) ಹಾಗೂ ದೀನಾ (11, 20, 29) ತಲಾ ಮೂರು ಸಲ ಚೆಂಡನ್ನು ಗುರಿ ಸೇರಿಸಿದರು. ಇತರ ಗೋಲುಗಳನ್ನು ದೀಪು (3, 42), ಸಂಜು (5) ಹಾಗೂ ವಿನು (16) ಗಳಿಸಿದರು.ದಿನದ ಮತ್ತೊಂದು ಪಂದ್ಯದಲ್ಲಿ ಡಿ.ಎ. ಅಸೋಸಿಯೇಷನ್‌ 4–1 ರಲ್ಲಿ ಇಸ್ರೋ ವಿರುದ್ಧ ಜಯ ಪಡೆಯಿತು. ಸುನಿಲ್‌ ಕುಮಾರ್‌ (5 ಮತ್ತು 39) ಹಾಗೂ ಪ್ರಸಾದ್‌ (14, 42) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. ಇಸ್ರೋ ತಂಡದ ಏಕೈಕ ಗೋಲನ್ನು ಪ್ರೇಮ್‌ (39) ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry