ಹಾಕಿ: ಕೂಡಿಗೆ ಶಾಲೆಗೆ ಭರ್ಜರಿ ಗೆಲುವು

7

ಹಾಕಿ: ಕೂಡಿಗೆ ಶಾಲೆಗೆ ಭರ್ಜರಿ ಗೆಲುವು

Published:
Updated:

ಬೆಂಗಳೂರು: ಉತ್ತಮ ಹೊಂದಾ­ಣಿಕೆಯ ಆಟವಾಡಿದ ಕೂಡಿಗೆಯ ಕ್ರೀಡಾ ಶಾಲಾ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ 6–0 ಗೋಲುಗಳಿಂದ ಜೆನಿತ್‌ ಹಾಕಿ ಕ್ಲಬ್‌ ತಂಡವನ್ನು ಮಣಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯೀ ತಂಡದ ಸೌಂದರ್ಯ 12ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು, 15ನೇ ನಿಮಿಷದಲ್ಲಿ ಇನ್ನೊಂದು ಗೋಲು ತಂದಿತ್ತರು. ಈ ತಂಡದ ಇನ್ನುಳಿದ ಗೋಲುಗಳನ್ನು ಕೃತಿಕಾ (22 ಮತ್ತು 26ನೇ ನಿ.), ಸಂಜುತಾ (28 ಮತ್ತು 49ನೇ ನಿ.) ಗಳಿಸಿದರು.ಹಿಂದಿನ ಪಂದ್ಯದಲ್ಲಿ ಸೋಲು ಕಂಡಿದ್ದ ಹುಬ್ಬಳ್ಳಿ ಹಾಕಿ ಕ್ಲಬ್‌ ತಂಡ 22–0 ಗೋಲುಗಳಿಂದ ಬಿಸಿವೈಎ ಎದುರು ಸುಲಭ ಗೆಲುವು ತನ್ನದಾಗಿಸಿಕೊಂಡಿತು.  ಚೈತ್ರಾ, ಮುನಿರತ್ನಮ್ಮ, ರಕ್ಷಿತಾ, ಜ್ಯೋತಿ ಮತ್ತು ಕೋಮಲ ಗೋಲು ಗಳಿಸಿದರು. ಮುನಿರತ್ನಮ್ಮ 10 ಗೋಲುಗಳನ್ನು ಗಳಿಸಿ ಹೆಚ್ಚು ಗೋಲು ಗಳಿಸಿದ ಕೀರ್ತಿಗೆ ಪಾತ್ರರಾದರು.ದಿನದ ಇನ್ನೊಂದು ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ‘ಎ’ ತಂಡ 5–2 ಗೋಲುಗಳಿಂದ ಆರ್‌ಡಿಟಿ ಹಾಕಿ ಕ್ಲಬ್‌ ಎದುರು ಗೆಲುವಿನ ನಗೆ ಬೀರಿತು.ಸುಷ್ಮಾ ಮೂರನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, 17ನೇ ನಿಮಿಷದಲ್ಲಿ ಇನ್ನೊಂದು ಗೋಲು ತಂದಿತ್ತರು. ನಿಶ್ಚಿತಾ (32 ಹಾಗೂ 48ನೇ ನಿ.) ಮತ್ತು ಭಾಗ್ಯಶ್ರೀ (47ನೇ ನಿ.) ಗೋಲು ಕಲೆ ಹಾಕಿ ಗೆಲುವಿನ ಅಂತರ ಹೆಚ್ಚಿಸಿದರು.ಭಾನುವಾರದ ಪಂದ್ಯಗಳು: ಭಾರತ ಕ್ರೀಡಾ ಪ್ರಾಧಿಕಾರ ‘ಎ’–ಜೆನಿತ್‌ (ಬೆಳಿಗ್ಗೆ 8.30ಕ್ಕೆ) ಮತ್ತು ಕ್ರೀಡಾ ಪ್ರಾಧಿಕಾರ ‘ಬಿ’–ವಾಸು ಕ್ಲಬ್‌ (9.30).

‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ ಭಾನುವಾರ ಆರಂಭವಾಗಲಿದೆ. ಈ ಪಂದ್ಯಗಳು 11.30ರ ನಂತರ ಆರಂಭವಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry