ಹಾಕಿ: ಕೆಎಸ್‌ಪಿ, ಸೆಂಟ್ರಲ್ ರೈಲ್ವೆಗೆ ಪ್ರಶಸ್ತಿ

7

ಹಾಕಿ: ಕೆಎಸ್‌ಪಿ, ಸೆಂಟ್ರಲ್ ರೈಲ್ವೆಗೆ ಪ್ರಶಸ್ತಿ

Published:
Updated:

ಗದಗ:  ಬೆಂಗಳೂರಿನ ಕೆ.ಎಸ್.ಪಿ. ತಂಡ, ಗದಗ-ಬೆಟಗೇರಿ ಹನುಮಾನ್ ಬ್ಲೆಸ್ಸಿಂಗ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಶಿವಕುಮಾರ ಉದಾಸಿ ರಾಷ್ಟ್ರಮಟ್ಟದ ಹಾಕಿ ಟೂರ್ನಿಯ ಪುರುಷರ ವಿಭಾಗದ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿತು.ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಅದು ಮುಂಬೈಯ ಆರ್.ಸಿ.ಎಫ್. ತಂಡವನ್ನು ಮಣಿಸಿತು.

ನಿಗದಿತ ಅವಧಿಯಲ್ಲಿ 3-3ರ ಸಮಬಲ ಸಾಧಿಸಿದ ಕಾರಣ ಫಲಿತಾಂಶಕ್ಕಾಗಿ ಹೆಚ್ಚುವರಿ ಅವಧಿಯ ಮೊರೆ ಹೋಗಬೇಕಾಯಿತು. ಐದನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಪ್ರದೀಪ, ತಂಡಕ್ಕೆ ಜಯ ತಂದುಕೊಟ್ಟರು.ಸೆಂಟ್ರಲ್ ರೈಲ್ವೆಗೆ ಪ್ರಶಸ್ತಿ: ಮಹಿಳಾ ವಿಭಾಗದ ಪ್ರಶಸ್ತಿಯನ್ನು ಮುಂಬೈನ ಸೆಂಟ್ರಲ್ ರೈಲ್ವೆ ತಂಡ ಗಳಿಸಿಕೊಂಡಿತು. ಫೈನಲ್‌ನಲ್ಲಿ ಅದು ಭೋಪಾಲ್‌ನ ಸಾಯಿ ತಂಡವನ್ನು ಏಕಪಕ್ಷೀಯವಾದ 2 ಗೋಲುಗಳಿಂದ ಮಣಿಸಿತು. ಪ್ರತಿಭಾ ಹಾಗೂ ರಂಜೀತಾ ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry