ಭಾನುವಾರ, ಮೇ 16, 2021
28 °C

ಹಾಕಿ: ಕೆನರಾ ಬ್ಯಾಂಕ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆನರಾ ಬ್ಯಾಂಕ್ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4-2 ಗೋಲುಗಳಿಂದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) `ಬಿ~ ತಂಡದ ಎದುರು ಗೆಲುವು ಸಾಧಿಸಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರೂ ಎಂಇಜಿ `ಬಿ~ ಸೋಲು ಕಂಡಿತು. ವಿಜಯಿ ತಂಡದ ಕೆ.ಎಂ. ಸೋಮಣ್ಣ 6ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಕೆ.ಪಿ. ದಿನೇಶ್ (45ನೇ. ನಿ), ರೋನಲ್ ಕಿರಣ್ (47ನೇ ನಿ.) ಹಾಗೂ ಜಾನ್ ವರ್ಗೀಸ್ (54ನೇ ನಿ.) ಗೋಲು ತಂದಿಟ್ಟರು.ಎಂಇಜಿ ತಂಡದ ಸುನಿಲ್ ಮತ್ತು ಸಾಜಿಲ್ ಕ್ರಮವಾಗಿ 2, 11ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಡ್ರಾ ಪಂದ್ಯದಲ್ಲಿ ಎಚ್‌ಎಎಲ್: ಎಚ್‌ಎಎಲ್ ಹಾಗೂ ಐಎಎಫ್ ತಂಡಗಳ ನಡುವಿನ ಪಂದ್ಯವು 2-2ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.ಲವ್‌ಪ್ರೀತ್ ಸಿಂಗ್ (5ನೇ ನಿ.) ಎಂ. ತೊಪ್ನಾ (36ನೇ ನಿ.) ಗೋಲು ಗಳಿಸಿ ಐಎಎಫ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ, ಎಚ್‌ಎಎಲ್‌ತಂಡದ ಎನ್.ಎಸ್. ರಮೇಶ್ ಹಾಗೂ ಮಹಮ್ಮದ್ ನಯಿಮುದ್ದೀನ್ ಕ್ರಮವಾಗಿ 25 ಮತ್ತು 50ನೇ ನಿಮಿಷದಲ್ಲಿ ಗೋಲು ಗಳಿಸಿ ಐಎಎಫ್ ಗೆಲುವಿನ ಆಸೆಗೆ ಅಡ್ಡಿಯಾದರು.ಎಂಇಜಿ `ಎ~ ತಂಡ 5-1ಗೋಲುಗಳಿಂದ ಸೆಂಟ್ರಲ್ ಎಕ್ಸೈಜ್ ಎದುರು ಗೆಲುವು ಪಡೆಯಿತು. ವಿಜಯಿ ತಂಡದ ಮುತ್ತಣ್ಣ (2 ಹಾಗೂ 10ನೇ ನಿ.), ಸಿರಾಜ್ (4ನೇ ನಿ.), ರಾಬಿನ್ (55ನೇ ನಿ.) ಮತ್ತು ಎ.ಯು. ಕಾರಿಯಪ್ಪ (59ನೇ ನಿ.) ಗೋಲು ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.