ಹಾಕಿ ಕ್ರೀಡೆಗೆ ಪ್ರೋತ್ಸಾಹ ಅವಶ್ಯ

7

ಹಾಕಿ ಕ್ರೀಡೆಗೆ ಪ್ರೋತ್ಸಾಹ ಅವಶ್ಯ

Published:
Updated:

ಸೋಮವಾರಪೇಟೆ: ಹಾಕಿಯಲ್ಲಿ ತೊಡಗಿಕೊಂಡಿರುವ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಹಾಗೂ ತರಬೇತಿ ಅವಶ್ಯ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ ಹೇಳಿದರು.ಬುಧವಾರ ಬೆಳಿಗ್ಗೆ ನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಸ್ಪೋರ್ಟಿಂಗ್ ಕ್ಲಬ್ ಆಶ್ರಯದಲ್ಲಿ ಆರಂಭಗೊಂಡ 20 ದಿನಗಳ ದಸರಾ ಹಾಕಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಹಾಕಿ ರಾಷ್ಟ್ರೀಯ ಕ್ರೀಡೆಯಾದರೂ ಈ ಕ್ರೀಡೆಗೆ ಹೆಚ್ಚಿನ ಮಟ್ಟದಲ್ಲಿ ಉತ್ತೇಜನ ಸಿಗದಿರುವುದು ವಿಷಾದಕರ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಹಾಕಿ ಕ್ರೀಡೆಯ ಬಗ್ಗೆ ಅರಿವು ಹಾಗೂ ಆಸಕ್ತಿ ಹೆಚ್ಚಿಸಬಹುದು. ಸೋಮವಾರಪೇಟೆಯ ಶಾಲಾ ಮೈದಾನದಲ್ಲಿ ಆಟವಾಡಿದ ಹಲವು ಮಂದಿ ರಾಷ್ಟ್ರೀಯ ಹಾಕಿ ತಂಡದಲ್ಲಿ ಸ್ಥಾನ ಪಡೆದು ಒಲಿಂಪಿಯನ್ ಆಗಿರುವುದು ಹೆಮ್ಮೆಯ ಸಂಗತಿ ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ಮೂರ್ತಿ, ವೃತ್ತ ನಿರೀಕ್ಷಕ ಸಿದ್ದಯ್ಯ ಇದ್ದರು. ಕ್ಲಬ್‌ನ ಅಧ್ಯಕ್ಷ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಹರ್ಷ ನಿರಂಜನ್ ಸ್ವಾಗತಿಸಿದರು. ಸದಸ್ಯ ರವಿಚಂದ್ರ ವಂದಿಸಿದರು. ಉಪಾಧ್ಯಕ್ಷ ಬಿ.ಜಿ.ಅಭಿಷೇಕ್, ಸದಸ್ಯರಾದ ವಿನಯ್, ವಿಕ್ರಂ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry