ಹಾಕಿ ಚಾಂಪಿಯನ್‌ಷಿಪ್; ಬಿಎಸ್‌ಎನ್‌ಎಲ್‌ಗೆ ಜಯ

ಶನಿವಾರ, ಮೇ 25, 2019
27 °C

ಹಾಕಿ ಚಾಂಪಿಯನ್‌ಷಿಪ್; ಬಿಎಸ್‌ಎನ್‌ಎಲ್‌ಗೆ ಜಯ

Published:
Updated:

ಬೆಂಗಳೂರು: ಟಿ.ಜೆ. ಬೋಪಣ್ಣ ತೋರಿದ ಚುರುಕಾದ ಪ್ರದರ್ಶನದ ನೆರವಿನಿಂದ ಬಿಎಸ್‌ಎನ್‌ಎಲ್ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ತಂಡ 2-0ಗೋಲುಗಳಿಂದ ಕೂರ್ಗ್ ಬ್ಲೂಸ್ ಹಾಕಿ ಸಂಸ್ಥೆ ತಂಡವನ್ನು ಮಣಿಸಿತು.ಬೋಪಣ್ಣ ಈ ಗೆಲುವಿನ ರೂವಾರಿ ಎನಿಸಿದರು. ಈ ಆಟಗಾರ 7 ಹಾಗೂ 59ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿದರು. ಎದುರಾಳಿ ತಂಡದ ಪರ ಯಾವುದೇ ಗೋಲು ಬರಲಿಲ್ಲ.ದಿನದ ಇನ್ನೊಂದು ಪಂದ್ಯದಲ್ಲಿ ಬಿಇಎಂಎಲ್ ಬೆಂಗಳೂರು ತಂಡ 7-1ಗೋಲುಗಳಿಂದ ಫ್ಲೇಯಿಂಗ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು. ಬಿಇಎಂಎಲ್ ತಂಡದ ಕಿರಣ್ (8), ರಮೇಶ್ (9 ಹಾಗೂ 57), ಪ್ರದೀಪ್ ಮಾರಿಯಾ (11), ಅರವಿಂದ್ (21), ನಾಗಲಿಂಗಸ್ವಾಮಿ (54) ಹಾಗೂ ಸಚಿನ್ (59) ನಿಮಿಷಗಳಲ್ಲಿ ಗೋಲು ಕಲೆ ಹಾಕಿದರು.ಮತ್ತೊಂದು ಪಂದ್ಯದಲ್ಲಿ ಡಿವೈಎಸ್‌ಎಸ್ `ಎ~ ತಂಡ 5-2ಗೋಲುಗಳಿಂದ ಬಿಇಎಲ್ ತಂಡವನ್ನು ಸೋಲಿಸಿತು. ವಿಜಯಿ ತಂಡದ ಸುಧಾಕರ್ 19 ಹಾಗೂ 53ನೇ ನಿಮಿಷದಲ್ಲಿ, ಸಚಿನ್ ಮಲ್ಲಾಡ್ 24 ಹಾಗೂ 33ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಇನ್ನೊಂದು ಗೋಲು ಶಶಿ ಗೌಡ ಅವರಿಂದ 49ನೇ ನಿಮಿಷದಲ್ಲಿ ಬಂತು.ಸೋಮವಾರದ ಪಂದ್ಯಗಳು:
ಎಸ್‌ಡಬ್ಲ್ಯುಆರ್ ಹುಬ್ಬಳ್ಳಿ-ಸೀನರ್ಜಿ ಸ್ಪೋರ್ಟ್ಸ್ ಕ್ಲಬ್ (ಮಧ್ಯಾಹ್ನ 2.30) ಹಾಗೂ ಆರ್‌ಡಬ್ಲುಎಫ್-ಎಂಇಜಿ ಬಾಯ್ಸ ತಂಡ (ಸಂಜೆ 4ಗಂಟೆಗೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry