ಹಾಕಿ: ಜೂಡ್‌ ಫೆಲಿಕ್ಸ್‌ ಕ್ಲಬ್‌ಗೆ ಜಯ

7

ಹಾಕಿ: ಜೂಡ್‌ ಫೆಲಿಕ್ಸ್‌ ಕ್ಲಬ್‌ಗೆ ಜಯ

Published:
Updated:

ಬೆಂಗಳೂರು: ಜೂಡ್‌ ಫೆಲಿಕ್ಸ್‌ ಹಾಕಿ ಅಕಾಡೆಮಿ ತಂಡ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 16-0 ಗೋಲುಗಳಿಂದ ಬಾಷ್‌ ತಂಡವನ್ನು ಮಣಿಸಿತು.ಶುಕ್ರವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಸುರೇಶ್‌ (3, 9, 22, 33 ಮತ್ತು 36) ಐದು ಗೋಲುಗಳನ್ನು ಗಳಿಸಿ ಗಮನ ಸೆಳೆದರು.ಡಿ.ಎ. ಅಸೋಸಿಯೇಷನ್‌ ತಂಡ 5-0 ಗೋಲುಗಳಿಂದ ನ್ಯೂ ಅಶೋಕ ಕ್ಲಬ್‌ ವಿರುದ್ಧ ಜಯ ಪಡೆಯಿತು. ಬಾಬ್‌ ಜೊರ್‌ (13, 26, 36) ಮೂರು ಗೋಲುಗಳನ್ನು ಗಳಿಸಿದರು.ಇನ್ನೊಂದು ಪಂದ್ಯದಲ್ಲಿ ಅಯ್ಯಪ್ಪ ಹಾಕಿ ಅಕಾಡೆಮಿ ‘ಬಿ’ ತಂಡ 3-0 ರಲ್ಲಿ ಚಿತ್ರದುರ್ಗ ಹಾಕಿ ಕ್ಲಬ್‌ ತಂಡವನ್ನು ಸೋಲಿಸಿತು. ಎಸ್‌. ಹರ್ಷ (30, 49) ಹಾಗೂ ಸ್ಟಾಲಿನ್‌ ಆಭಿಲಾಷ್‌ (44) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು.ಶನಿವಾರ  ಐಟಿಸಿ- ಧ್ಯಾನ್‌ಚಂದ್‌ ಹಾಕಿ ಕ್ಲಬ್‌ ಹಾಗೂ ಸಿಎಸ್‌ಎಂಇ- ಧ್ಯಾನ್‌ಚಂದ್‌, ತುಮಕೂರು ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry