ಹಾಕಿ: ಜೈನ್‌ ಕಾಲೇಜಿಗೆ ಜಯ

7

ಹಾಕಿ: ಜೈನ್‌ ಕಾಲೇಜಿಗೆ ಜಯ

Published:
Updated:

ಬೆಂಗಳೂರು: ಸೆಂತಿಲ್‌ ಕುಮಾರ್‌ ತಂದಿತ್ತ ಗೋಲಿನ ನೆರವಿನಿಂದ ಎಸ್‌ಬಿಎಂ ಜೈನ್‌ ಕಾಲೇಜು ತಂಡ ದವರು ಕೆಎಸ್‌ಎಚ್‌ಎ ರಾಜ್ಯ ‘ಎ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ ಷಿಪ್‌ನಲ್ಲಿ ಜಯ ಪಡೆದರು.ಕೆಎಸ್‌ಎಚ್‌ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಜೈನ್‌ ಕಾಲೇಜು ತಂಡ 3-2 ಗೋಲುಗಳಿಂದ ಎಂಇಜಿ ಬಾಯ್ಸ್‌ ತಂಡವನ್ನು ಮಣಿಸಿತು.

ಪಂದ್ಯದ 11ನೇ ನಿಮಿಷದಲ್ಲಿ ಗೋಲು ಗಳಿಸಿದ ಶಶಿ ಎಂಇಜಿ ತಂಡಕ್ಕೆ ಮುನ್ನಡೆ ತಂದಿತ್ತರು. ಸುರೇಂದ್ರ 24ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ಕಾರಣ ಜೈನ್‌ ತಂಡ ಸಮಬಲ ಸಾಧಿಸಿತು.ರವೀಂದರ್‌ (27ನೇ ನಿ.) ಗೋಲು ಗಳಿಸಿ ಎಂಇಜಿಗೆ ಮತ್ತೆ ಮೇಲುಗೈ ತಂದಿತ್ತರು. ಆದರೆ ಮರುಹೋರಾಟ ನಡೆಸಿದ ಜೈನ್‌ ತಂಡ ಗೌತಮ್‌ (31) ಗಳಿಸಿದ ಗೋಲಿನ ನೆರವಿನಿಂದ 2-2 ರಲ್ಲಿ ಸಮಬಲ ಸಾಧಿಸಿತು.ಪಂದ್ಯದ ಎರಡನೇ ಅವಧಿಯಲ್ಲಿ ಸೆಂತಿಲ್‌ ಕುಮಾರ್‌ (43ನೇ ನಿ.) ಗೋಲು ಗಳಿಸಿದರಲ್ಲದೆ, ಜೈನ್‌ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಜೈನ್‌ ಕಾಲೇಜು- ಐಟಿಐ, ಡಿವೈಇಎಸ್‌ ‘ಬಿ’- ಬೆಳಗಾವಿ ಜಿಲ್ಲಾ ತಂಡ ಮತ್ತು ಬಿಎಸ್‌ಎನ್‌ಎಲ್‌- ಎಎಸ್‌ಸಿ ಬಾಯ್ಸ್‌ ತಂಡಗಳು ಎದುರಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry