ಹಾಕಿ: ಡಿವೈಇಎಸ್‌ ಎದುರು ಸೋತ ಕ್ರೀಡಾ ಪ್ರಾಧಿಕಾರ

7

ಹಾಕಿ: ಡಿವೈಇಎಸ್‌ ಎದುರು ಸೋತ ಕ್ರೀಡಾ ಪ್ರಾಧಿಕಾರ

Published:
Updated:

ಬೆಂಗಳೂರು: ಡಿವೈಇಎಸ್‌ ‘ಎ’ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಎರಡನೇ ಹಂತದ ಮೊದಲ ಪಂದ್ಯದಲ್ಲಿ 6–0 ಗೋಲುಗಳಿಂದ ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ ಎದುರು ಗೆಲುವು ಸಾಧಿಸಿತು. ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಟೂರ್ನಿ ನಡೆಯುತು್ತಿದೆ.

ಕ್ರೀಡಾ ಪ್ರಾಧಿಕಾರ ‘ಬಿ’ ತಂಡ ಅನುಭವಿಸಿದ ಸತತ ಎರಡನೇ ಸೋಲು ಇದಾಗಿದೆ. ಬುಧವಾರ ನಡೆದ ಮೊದಲ ಹೋರಾಟದಲ್ಲಿ ಕ್ರೀಡಾ ಪ್ರಾಧಿಕಾರ ‘ಎ’ ಎದುರು ನಿರಾಸೆ ಕಂಡಿತ್ತು. ಈ ತಂಡಕ್ಕೆ ಎರಡನೇ ಪಂದ್ಯದಲ್ಲಿ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.ವಿಜಯೀ ತಂಡದ ತನುಶ್ರೀ 5ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ­ದರೆ, ರಂಜಿತಾ 12ನೇ ನಿಮಿಷದಲ್ಲಿ ಎರಡನೇ ಗೋಲು ತಂದಿತ್ತರು. ಸಂಧ್ಯಾ (27, 59ನೇ ನಿಮಿಷ), ನಂದಿನಿ (52ನೇ ನಿ.) ಮತ್ತು ಕೋಮಲಾ (56ನೇ ನಿ.) ಇನ್ನುಳಿದ ಗೋಲುಗಳನ್ನು ಗಳಿಸಿದರು.ಪ್ರಾಧಿಕಾರಕ್ಕೆ ಮತ್ತೊಂದು ಗೆಲುವು:  ಕ್ರೀಡಾ ಪ್ರಾಧಿಕಾರ ‘ಎ’ ತಂಡ 3–1 ಗೋಲುಗಳಿಂದ ಹುಬ್ಬಳ್ಳಿಯ ವಾಸು ಸ್ಪೋರ್ಟ್ಸ್‌ ಕ್ಲಬ್‌ ಎದುರು ವಿಜಯ ಸಾಧಿಸಿತು. ಸುಷ್ಮಾ (42ನೇ ನಿಮಿಷ), ಲೀಲಾವತಿ (44ನೇ ನಿ.) ಮತ್ತು ರಂಜಿತಾ (55ನೇ ನಿ.) ಗೋಲು ಗಳಿಸಿ ಕ್ರೀಡಾ ಪ್ರಾಧಿಕಾರದ ಜಯಕ್ಕೆ ಕಾರಣರಾದರು. ಹುಬ್ಬಳ್ಳಿ ತಂಡದ ಏಕೈಕ ಗೋಲನ್ನು ಕೆ.ಸಿ. ಚೈತ್ರಾ 60ನೇ ನಿಮಿಷದಲ್ಲಿ ಗಳಿಸಿದರು.ಬಾಷ್‌ಗೆ ಮಣಿದ ಕುಮಾರೇಶ್ವರ: ಪುರುಷರ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಗುರು­ವಾ­ರದ ಪಂದ್ಯದಲ್ಲಿ ಬೆಂಗಳೂರಿನ ಬಾಷ್‌ ತಂಡ 5–3 ಗೋಲುಗಳಿಂದ ಶ್ರೀ ಕುಮಾರೇಶ್ವರ ಕ್ಲಬ್‌ ಎದುರು ಗೆಲುವು ಸಾಧಿಸಿತು. ವಿಜಯಿ ತಂಡದ ರಂಜನ್‌ (2 ಹಾಗೂ 48ನೇ ನಿ.), ಅಂಥೋಣಿ (16  ಮತ್ತು 28ನೇ ನಿ.), ಸಂತೋಷ್‌ (20ನೇ ನಿ.) ಗೋಲು ಗಳಿಸಿದರು.ಇನ್ನೊಂದು ಪಂದ್ಯದಲ್ಲಿ ವಾರಿಯರ್‌ ಸ್ಪೋರ್ಟ್ಸ್‌ ಕ್ಲಬ್‌ 7–1 ಗೋಲುಗಳಿಂದ ಬೆಂಗಳೂರು ಫ್ರೆಂಡ್ಸ್‌ ಕ್ಲಬ್‌ ಎದುರು ಜಯಭೇರಿ ಮೊಳಗಿಸಿತು. ಮಹಿಳಾ ಹಾಕಿ ಲೀಗ್‌ನ ಶುಕ್ರವಾರದ ಪಂದ್ಯಗಳು: ಕ್ರೀಡಾ ಪ್ರಾಧಿಕಾರ ‘ಬಿ‘–ವಾಸು ಕ್ಲಬ್‌ (ಬೆಳಿಗ್ಗೆ 9.30) ಮತ್ತು ಡಿವೈಇಎಸ್‌ ‘ಎ’–ಕ್ರೀಡಾ ಪ್ರಾಧಿಕಾರ ‘ಎ’ (ಬೆ. 10.30).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry