ಹಾಕಿ: ಡಿವೈಎಸ್‌ಎಸ್‌ ಗೆಲುವಿನ ಆರಂಭ

7

ಹಾಕಿ: ಡಿವೈಎಸ್‌ಎಸ್‌ ಗೆಲುವಿನ ಆರಂಭ

Published:
Updated:

ಬೆಂಗಳೂರು: ಡಿವೈಎಸ್‌ಎಸ್‌ ‘ಎ’ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಗುರುವಾರ 3–0 ಗೋಲುಗಳಿಂದ ಹುಬ್ಬಳ್ಳಿಯ ವಾಸು ಸ್ಪೋಟ್ಸ್ ಕ್ಲಬ್‌ ಎದುರು ಗೆಲುವು ಸಾಧಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿವೈಎಸ್‌ಎಸ್‌ ಹೊಂದಾಣಿಕೆಯ ಆಟವಾಡಿತು. ರಶ್ಮಿ ಎರಡನೇ ನಿಮಿಷದಲ್ಲಿ ಗೋಲಿನ ಖಾತೆ ಆರಂಭಿಸಿದರೆ, ನಂದಿನಿ (54ನೇ ನಿ.) ಎರಡನೇ ಗೋಲು ತಂದಿತ್ತರು. ಕಾವ್ಯಶ್ರೀ  59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಗಳಿಸಿದರು.ದಿನದ ಇನ್ನೊಂದು ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ‘ಎ’ ತಂಡ 9–2 ಗೋಲುಗಳಿಂದ ಕ್ರೀಡಾ ಪ್ರಾಧಿಕಾರ ‘ಬಿ’ ತಂಡವನ್ನು ಮಣಿಸಿತು.24ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಭಾಗ್ಯಶ್ರೀ  ಮೊದಲ ಗೋಲು ಗಳಿಸಿದರು. ಸುಷ್ಮಾ (27, 36, 42, 46ನೇ ನಿಮಿಷ), ರಂಜಿತಾ (37, 48ನೇ ನಿ.), ನಿಶ್ಚಿತಾ (39, 50ನೇ ನಿ.) ಮತ್ತು ಲೀಲಾವತಿ (53ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಗುರುವಾರದ ಪಂದ್ಯಗಳು: ಡಿವೈಇಎಸ್‌ ‘ಎ’–ಭಾರತ ಕ್ರೀಡಾ ಪ್ರಾಧಿಕಾರ ‘ಬಿ‘ (ಬೆಳಿಗ್ಗೆ 9.30) ಮತ್ತು ಕ್ರೀಡಾ ಪ್ರಾಧಿಕಾರ–ವಾಸು ಕ್ಲಬ್‌ (ಬೆ. 10.30).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry