ಬುಧವಾರ, ಡಿಸೆಂಬರ್ 11, 2019
21 °C

ಹಾಕಿ: ಡ್ರಾ ಪಂದ್ಯದಲ್ಲಿ ಎಂಇಜಿ

Published:
Updated:
ಹಾಕಿ: ಡ್ರಾ ಪಂದ್ಯದಲ್ಲಿ ಎಂಇಜಿ

ಬೆಂಗಳೂರು: ಚುರುಕಿನ ಆಟದಿಂದ ಪ್ರಬಲ ಪೈಪೋಟಿ ನಡೆಸಿದ ಮದ್ರಾಸ್ ಎಂಜಿನಿಯರ್ಸ್ ಗ್ರೂಪ್ (ಎಂಇಜಿ) ಹಾಗೂ ಫೋರ್ಟಿಸ್ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ಓಜೋನ್ ಗ್ರೂಪ್ ರಾಜ್ಯ ಸೂಪರ್ ಡಿವಿಷನ್ ಲೀಗ್‌ನ ಗುರುವಾರದ ಪಂದ್ಯವನ್ನು 1-1 ಗೋಲಿನಿಂದ ಡ್ರಾ ಮಾಡಿಕೊಂಡರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫೋರ್ಟಿಸ್ ತಂಡವು ಐದನೇ ನಿಮಿಷದಲ್ಲಿಯೇ ಮುನ್ನಡೆ ಸಾಧಿಸುವಲ್ಲಿ ಯಶಸ್ವಿ ಆಯಿತು. ನವದೀಪ್ ಸಿಂಗ್ ಅವರು ಗಳಿಸಿದ ಈ ಗೋಲಿನಿಂದಾಗಿ ಉತ್ಸಾಹಿತರಾದರೂ, ಮತ್ತೆ ಎದುರಾಳಿ ರಕ್ಷಣಾ ಕೋಟೆಯನ್ನು ಕೆಡವಲು ಫೋರ್ಟಿಸ್‌ಗೆ ಅವಕಾಶ ಸಿಗಲಿಲ್ಲ.

ದಾಳಿಯನ್ನು ಚುರುಕುಗೊಳಿಸಿದರೂ ಎಂಇಜಿ ತಂಡದವರು ತಿರುಗೇಟು ನೀಡುವುದು ಸುಲಭವಾಗಲಿಲ್ಲ. ಚೆಂಡನ್ನು ಎದುರಾಳಿ ಆವರಣಕ್ಕೆ ಅನೇಕ ಬಾರಿ ಸಾಗಿಸಿದರೂ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಲಿಲ್ಲ.

ಪ್ರತಿಕ್ರಿಯಿಸಿ (+)