ಭಾನುವಾರ, ಡಿಸೆಂಬರ್ 15, 2019
26 °C

ಹಾಕಿ: ಡ್ರಾ ಪಂದ್ಯದಲ್ಲಿ ಕ್ರೀಡಾ ಪ್ರಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಡ್ರಾ ಪಂದ್ಯದಲ್ಲಿ ಕ್ರೀಡಾ ಪ್ರಾಧಿಕಾರ

ಬೆಂಗಳೂರು: ಸುಷ್ಮಾ ಗಳಿಸಿದ ಮೂರು ಗೋಲುಗಳ ನೆರವಿನಿಂದ ಭಾರತ ಕ್ರೀಡಾ ಪ್ರಾಧಿಕಾರ ‘ಎ’ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ 6–0 ಗೋಲು­ಗಳಿಂದ ವೈಇಎಸ್‌ಡಿ ‘ಬಿ’ ತಂಡವನ್ನು ಸೋಲಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯೀ ತಂಡದ ನಿಶ್ಚಿತಾ 9ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಚೈತ್ರಾ 24ನೇ ನಿಮಿಷದಲ್ಲಿ ಎರಡನೇ ಗೋಲು ಕಲೆ ಹಾಕಿದರು. ನಂತರ ಚುರುಕಿನ ಆಟ ಪ್ರದರ್ಶಿಸಿದ ಸುಷ್ಮಾ 36, 46 ಮತ್ತು 49ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಈ ತಂಡದ ಇನ್ನೊಂದು ಗೋಲನ್ನು ಲೀಲಾವತಿ 48ನೇ ನಿಮಿಷದಲ್ಲಿ ತಂದಿತ್ತರು. ವೈಇಎಸ್‌ಡಿ ‘ಎ’ ಮತ್ತು ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ ತಂಡಗಳ ನಡುವಿನ ಪಂದ್ಯವು ಗೋಲು ರಹಿತವಾಗಿ ಡ್ರಾದಲ್ಲಿ ಅಂತ್ಯ ಕಂಡಿತು.ದಿನದ ಇನ್ನೊಂದು ಪಂದ್ಯದಲ್ಲಿ ಗೋಲುಗಳ ಮಳೆ ಸುರಿಸಿದ ಆರ್‌ಡಿಟಿ ಹಾಕಿ ಕ್ಲಬ್‌ 18–0 ಗೋಲುಗಳಿಂದ ಬಿಸಿವೈಎ ತಂಡವನ್ನು ಮಣಿಸಿತು.ತರಂಗಿಣಿ (14, 21ನೇ ನಿ.), ಮಹಾಲಕ್ಷ್ಮಿ (3, 11, 16ನೇ ನಿ.), ನಳಿನಿ (8, 16, 17, 18, 19, 29 ಮತ್ತು 38ನೇ ನಿ.), ಪದ್ಮಲತಾ (15 ಹಾಗೂ 26ನೇ ನಿ.), ನವನೀತ್‌ ಕುಮಾರಿ (18, 30) ಮತ್ತು ಭಾರತಿ (34, 40ನೇ ನಿ.) ಗೋಲುಗಳನ್ನು ಗಳಿಸಿದರು.ಶನಿವಾರದ ಪಂದ್ಯಗಳು: ಹುಬ್ಬಳ್ಳಿ ವಾಸು ಕ್ಲಬ್‌–ಬಿಸಿವೈಎ (ಮಧ್ಯಾಹ್ನ 2ಕ್ಕೆ), ಭಾರತ ಕ್ರೀಡಾ ಪ್ರಾಧಿಕಾರ ‘ಎ’–ಆರ್‌ಡಿಟಿ ಹಾಕಿ ಕ್ಲಬ್‌ (3ಕ್ಕೆ) ಮತ್ತು ಸರ್ಕಾರಿ ಶಾಲೆ ಕೂಡಿಗೆ–ಜೀನತ್‌ ಹಾಕಿ ಕ್ಲಬ್‌ (ಸಂಜೆ 4ಕ್ಕೆ)

ಪ್ರತಿಕ್ರಿಯಿಸಿ (+)