ಹಾಕಿ: ದಕ್ಷಿಣ ಆಫ್ರಿಕಾಕ್ಕೆ ಶರಣಾದ ಭಾರತ

7

ಹಾಕಿ: ದಕ್ಷಿಣ ಆಫ್ರಿಕಾಕ್ಕೆ ಶರಣಾದ ಭಾರತ

Published:
Updated:

ನವದೆಹಲಿ: ಅಗ್ರ ರ್ಯಾಂಕಿಂಗ್ ನ ದಕ್ಷಿಣ ಆಫ್ರಿಕಾ ತಂಡದ ವನಿತೆಯರ ಛಲದ ಹೋರಾಟದ ಮುಂದೆ ಬುಧವಾರ ಸಂಜೆ ಶರಣಾದ ಭಾರತದ ವನಿತೆಯರು ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡರು.

ಲೀಗ್ ಸುತ್ತಿನ ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 5-2ರಿಂದ ಭಾರತದ ವನಿತೆಯರನ್ನು ಸೋಲಿಸಿ, ಅಗ್ರಸ್ಥಾನಕ್ಕೇರಿ ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿತು.

ದಕ್ಷಿಣ ಆಫ್ರಿಕಾ `ಟ್ರಂಪ್‌ಕಾರ್ಡ್~ ಹಾಕಿ   ಟೆಸ್ಟ್‌ನಲ್ಲಿ ಹೆಚ್ಚು ಗೋಲು ಗಳಿಸಿದ ದಾಖಲೆಯಿರುವ ಪೈಟಿ ಕೋಝಿಯನ್ನು ಬಿಟ್ಟು ಕಣಕ್ಕಿಳಿದಿತ್ತು. ಆರಂಭದಿಂದಲೇ ವೇಗದ ಆಟಕ್ಕಿಳಿದು ಆಫ್ರಿಕಾದ ವನಿತೆಯರು ಉತ್ತಮ ಆಟವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry